ಕೆಟ್ಟುನಿಂತ ಕಾರಿನಲ್ಲೇ 2 ವರ್ಷ ಕಳೆದಳಂತೆ ಈ ಯುವತಿ! ಏನಿದು ಕಥೆ ಗೊತ್ತಾ?

4

ಹೈದರಾಬಾದ್: ಸತತ ಎರಡು ವರ್ಷಗಳಿಂದ ಯುವತಿಯೊಬ್ಬಳು ಕೆಟ್ಟುನಿಂತ ಕಾರಿನಲ್ಲೇ ವಾಸ ಮಾಡುತ್ತಿರುವ ಘಟನೆ ಹೈದರಾಬಾದ್‌ನ ಎಸ್‌ಆರ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಧುರಾ ನಗರದಲ್ಲಿ ಬೆಳಕಿಗೆ ಬಂದಿದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಪ್ರಕರಣ ಗೊತ್ತಾಗಿದೆ.

ವಿಶೇಷ ಅಂದರೆ ಈ ಯುವತಿಯ ಹೆಸರಿನಲ್ಲೇ ಕಾರು ನೋಂದಣಿಕೆಯಾಗಿದ್ದು, 30 ವರ್ಷದ ಗರ‍್ರಂ ಅನಿತಾ ಎಂಬುವರೇ ಮಾರುತಿ ಓಮ್ನಿ (ಎಪಿ 31 ಕ್ಯೂ- 6434) ಕಾರಿನಲ್ಲಿ ವಾಸ ಮಾಡುತ್ತಿರುವ ಯುವತಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈಕೆಯ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದಾರೆ.

ಅನಿತಾ ರಾಜದೂತ್ ಹಾಸ್ಟೆಲ್‌ನಲ್ಲಿ ಇದ್ದರು. ಎರಡು ವರ್ಷಗಳ ಹಿಂದೆ ಶುಲ್ಕ ಪಾವತಿಸದ ಕಾರಣ ಹಾಸ್ಟೆಲ್ ಮ್ಯಾನೇಜರ್ ಈಕೆಯನ್ನು ಹಾಸ್ಟೆಲ್‌ನಿಂದ ಹೊರ ಕಳುಹಿಸಿದ್ದಾರೆ. ಇದರಿಂದಾಗಿ ತನ್ನ ವಸ್ತುಗಳನ್ನು ತೆಗೆದುಕೊಂಡು ಬಂದ ಅನಿತಾ ಕಾರಿನಲ್ಲಿ ವಾಸಿಸುತ್ತಿದ್ದಾಳೆ. ಸ್ಥಳೀಯರು ಈಕೆಗೆ ಅನ್ನ ನೀಡುತ್ತಿದ್ದಾರೆ. ಕಾರಿನಲ್ಲೇ ಮಲಗುವ ಮೂಲಕ ಎರಡು ವರ್ಷಗಳನ್ನು ಕಳೆದಿದ್ದಾಳೆ. ಸದ್ಯ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದಕ್ಕೆ ಸಂಚಾರ ಪೊಲೀಸರು ಆಕೆಗೆ ದಂಡ ವಿಧಿಸಿ ಕೌನ್ಸೆಲಿಂಗ್ ಮಾಡಲಾಗುವುದು ಎಂದು ಇನ್ಸ್ಪೆಕ್ಟರ್ ಹೇಳಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!