ರೈತರಿಗೆ ಸೇರಿದ್ದ 20 ಲಕ್ಷ ದರೋಡೆ.! ಖಾರದ ಪುಡಿ ಎರಚಿ ಪರಾರಿ
ದಾವಣಗೆರೆ: ಅಡಿಕೆ ಮಾರಿ ರೈತರಿಗೆ ಸೇರಿದ್ದ 20 ಲಕ್ಷ ಹಣ ತೆಗೆದುಕೊಂಡು ಹೋಗುವಾಗ ಖಾರದ ಪುಡಿ ಎರಚಿ ಹಣ ದರೋಡೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಅರಗದಹಳ್ಳಿ ಗ್ರಾಮದ ದೇವರಾಜ್ ಎಂಬುವವರು ಈ ಹಿಂದೆ ಹಲವು ರೈತರ ಅಡಿಕೆಯನ್ನ ದಾವಣಗೆರೆಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದರಂತೆ, ನಿನ್ನೆ ದಿನಾಂಕ ಎಪ್ರಿಲ್ 11 ರಂದು ವರ್ತಕರಿಂದ ಹಣ ಪಡೆದಿದ್ದಾರೆ. ಚುನಾವಣಾ ನೀತಿ ಸಂಹಿತೆ ಇರುವ ಹಿನ್ನೆಲೆ ಹಣದ ನಿಖರವಾದ ದಾಖಲೆ ಇಲ್ಲದಿದ್ದರಿಂದ ದಾವಣಗೆರೆಯ ಅವರಗೆರೆ ಬಳಿಯ ಬಸವನಗೌಡ ಬಡಾವಣೆ ಮುಖಾಂತರ ರಾಷ್ಟ್ರೀಯ ಹೆದ್ದಾರಿ 48 ರ ಸರ್ವೀಸ್ ರಸ್ತೆ ಮೂಲಕ ತೆರಳುತ್ತಿದ್ದಾಗ ದರೋಡೆಯಾಗಿದೆ ಎನ್ನಲಾಗುತ್ತಿದೆ.
ಆಟೋದಲ್ಲಿ ದೇವರಾಜ್, ಜಯರಾಜ್ ಶಫಿವುಲ್ಲಾ ಮೂವರು ಹೋಗುವಾಗ 5 ಜನ ಅನಾಮಧೇಯ ವ್ಯಕ್ತಿಗಳು ಬಂದು ಖಾರದ ಪುಡಿಯನ್ನು ಇವರುಗಳ ಮೇಲೆ ಎರಚಿ 20 ಲಕ್ಷ ಹಣವನ್ನ ದರೋಡೆ ಮಾಡಿ ಪರಾರಿಯಾಗಿದ್ದಾರೆ.
ದೇವರಾಜ್ ಅಡಿಕೆ ವ್ಯಾಪಾರಿಯಾಗಿದ್ದ ಎನ್ನಲಾಗಿದೆ, ಇವರು ತಮ್ಮ ಗ್ರಾಮದ ಸುತ್ತಮುತ್ತಲಿನ ರೈತರುಗಳ ಅಡಿಕೆಯನ್ನ ತೆಗೆದುಕೊಂಡು ಬಂದು ದಾವಣಗೆರೆಯಲ್ಲಿ ಮಾರಾಟ ಮಾಡಿದ್ದರಂತೆ, ಹಣ ತೆಗೆದುಕೊಂಡು ಹೋಗುವಾಗ ಈ ಘಟನೆ ನಡೆದಿದ್ದು, ದಾವಣಗೆರೆ ವಿದ್ಯಾನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಒಟ್ಟಾರೆ ಏನೆ ಇರಲಿ ರೈತರು ಸೇರಿದಂತೆ ಸಾರ್ವಜನಿಕರು ಈ ರೀತಿಯಾಗಿ ಹಣ ತೆಗೆದುಕೊಂಡು ಹೋಗುವಾಗ ಸರಿಯಾದ ದಾಖಲೆಗಳನ್ನು ಇಟ್ಟುಕೊಂಡು ಜೋಪಾನವಾಗಿ ಸರಿಯಾದ ಮಾರ್ಗದಲ್ಲಿ ತೆರಳಿದ್ದರೆ ಇಂತಹ ಅನಾಹುತಗಳು ಸಂಭವಿಸುವುದಿಲ್ಲ ಎಂಬುದು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.