21ಕ್ಕೆ ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ನಿಂದ ವಸ್ತು ಪ್ರದರ್ಶನ, ಮಾರಾಟ ಮೇಳ

21. Exhibition and sales fair by Jain International Trade Organization

ದಾವಣಗೆರೆ: ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ವತಿಯಿಂದ ದಾವಣಗೆರೆಯ ಶಾಮನೂರು ರಸ್ತೆಯ ಬಾಪೂಜಿ ಸಮುದಾಯ ಭವನದಲ್ಲಿ ಜನವರಿ 21ರಂದು ವಿವಿಧ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ ಎಂದು ಜೀತೋ ಬಿಸಿನೆಸ್ ನೆಟ್‌ವರ್ಕ್ನ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಶ್ವೇತಾಗಾಂಧಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲಾ ಬಿಜೆಪಿ ಕಿಸಾನ್ ಮೋರ್ಚಾ ಅಧ್ಯಕ್ಷ ನಾಗರಾಜ್ ಲೋಕಿಕೆರೆ ವಸ್ತು ಪ್ರದರ್ಶನದ ಪ್ರಮುಖ ಪ್ರಯೋಜಕರಾಗಿದ್ದು, ಮೂಖ್ಯ ಅತಿಥಿಗಳಾಗಿ ಚೇತನಾ ಎಚುಕೇಷನ್ ಟ್ರಸ್ಟ್ನ ಮುಖ್ಯಸ್ಥೆ ಡಾ.ವಿ.ವಿಜಯಲಕ್ಷಿ ಆಗಮಿಸುವರು ಎಂದು ಮಾಹಿತಿ ನೀಡಿದರು.
ಮಹಿಳೆಯರಿಂದ ಮಹಿಳೆಯರಿಗಾಗಿ ಘೋಷ ವಾಕ್ಯದಡಿ ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕಳೆದ ಮೂರು ವರ್ಷದಿಂದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ನಡೆಸಲಾಗುತ್ತಿದೆ. ಮನೆಯಲ್ಲಿ ತಯಾರಿಸಿದ ಹಪ್ಪಳ, ಶೇಂಡಿಗೆ, ಎಂಬ್ರಾಡಯರಿ, ಆಭರಣಗಳು ಇತರೆ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ. ಪ್ರಥಮ ಮತ್ತು ಎರಡನೇ ವರ್ಷ ಸಣ್ಣ ಪ್ರಮಾಣದ ಮಳಿಗೆ ಅವಕಾಶ ನೀಡಲಾಗಿತ್ತು ಎಂದು ತಿಳಿಸಿದರು.
ಈ ವರ್ಷ 70ಕ್ಕೂ ಹೆಚ್ಚು ವಿಸ್ತಾರವಾದ ಮಳಿಗೆ ಇರಲಿವೆ. ನಮ್ಮ ಸಂಸ್ಥೆಯಡಿ ನಡೆದ ಪ್ರದರ್ಶನ ಮತ್ತು ಮಾರಾಟ ಮೇಳದಿಂಧ ಪ್ರಭಾವಿಗೊಂಡ ಅನೇಕ ಮಹಿಳೆಯರು ಸ್ವತಂತ್ರವಾಗಿ ಸಣ್ಣ ಮತ್ತು ಮಧ್ಯಮ ಸ್ತರದ ಕೈಗಾರಿಕೆ ನಡೆಸುವಂತಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!