24 ಗಂಟೆಯೂ ಮರಣೋತ್ತರ ಪರೀಕ್ಷೆ ನಡೆಸಬಹುದು – ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ

IMG_20211116_094631

ನವದೆಹಲಿ :ಸಮರ್ಪಕ ಮೂಲಭೂತ ಸೌಲಭ್ಯ ಇರುವ ಆಸ್ಪತ್ರೆಗಳಲ್ಲಿ ರಾತ್ರಿಯೂ ಮರಣೋತರ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ .

ಆದರೆ ಆತ್ಮಹತ್ಯೆ , ಹತ್ಯೆ , ಅತ್ಯಾಚಾರ , ಕೊಳೆತ ದೇಹ ಹಾಗೂ ಶಂಕಿತ ದುಷ್ಕೃತ್ಯದ ಪ್ರಕರಣಗಳಲ್ಲಿ ರಾತ್ರಿ ವೇಳೆ ಮರಣೋತ್ತರ ಪರೀಕ್ಷೆ ನಡೆಸುವಂತಿಲ್ಲ . ಈ ಬಗ್ಗೆ ಟ್ವಿಟ್ ಮಾಡಿರುವ ಕೇಂದ್ರ ಆರೋಗ್ಯಸಚಿವ ಮನ್‌ಸುಖ್ ಮಾಂಡವೀಯ , ಬ್ರಿಟಿಷರ ಕಾಲದ ಪದ್ಧತಿ ಮುಗಿದಿದೆ . ದಿನದ 24 ಗಂಟೆಯೂ ಮರಣೋತ್ತರ ಪರೀಕ್ಷೆ ನಡೆಸಬಹುದು ಎಂದು ಹೇಳಿದ್ದಾರೆ .

ಈ  ಹೊಸ ಪ್ರಕ್ರಿಯೆಯಿಂದ ಅಂಗಾಂಗ ದಾನ ಹಾಗೂ ಅಂಗಾಂಗ ಕಸಿಗೂ ನೆರ ವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ .

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!