246 ಮಕ್ಕಳಿಗೆ ಇಂದು ಕೊವಿಡ್.! 514 ಜನರಿಗೆ ಕೊರೊನಾ ಸೊಂಕು ದೃಡ.! ಜಿಲ್ಲೆಯಲ್ಲಿ 40.38% ಪಾಸಿಟಿವಿಟಿ ರೇಟ್.!

WhatsApp Image 2022-01-26 at 9.27.04 PM

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಜ. 26 ರಂದು 0 ಇಂದ 5 ವರ್ಷದೊಳಗಿನ 2 ಮಕ್ಕಳು, ಹಾಗೂ 5 ರಿಂದ 18 ವರ್ಷದೊಳಗಿನ 244 ಮಕ್ಕಳು, ಸೇರಿದಂತೆ, 1246 ಮಕ್ಕಳಿಗೆ ಸೋಂಕು ಕೊರೊನಾ ಸೊಂಕು ಪತ್ತೆಯಾಗಿದೆ.

ಐನೂರು ಮಂದಿಗೆ‌ಇಂದು ಕೊರೊನಾ ದೃಡಪಟ್ಟಿದ್ದು ಪ್ರತಿ ದಿನ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,462 ಕ್ಕೇರಿದೆ.

ದಾವಣಗೆರೆ 109, ಹರಿಹರ 80, ಜಗಳೂರು ತಾಲೂಕಿನಲ್ಲಿ 100, ಚನ್ನಗಿರಿ ತಾಲ್ಲೂಕಿನಲ್ಲಿ 86, ಹಾಗೂ ಹೊನ್ನಾಳಿ ತಾಲ್ಲೂಕಿನಲ್ಲಿ 97 ಮಂದಿಗೆ ಸೋಂಕು ತಗುಲಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊರ ಜಿಲ್ಲೆಗಳ 22 ಮಂದಿಗೆ ಕೊರೊನಾ ವೈರಸ್ ಸೋಂಕು ಇರುವುದು ಖಚಿತವಾಗಿದೆ. ಇನ್ನೂ ಒಟ್ಟು ಇಂದು 314 ಜನರು ಸೊಂಕಿತರು ಗುಣಮುಖರಾಗಿದ್ದಾರೆ.

ಶಾಲೆ/ಕಾಲೇಜು ರಜೆ ನೀಡಲಾಗಿರುವ ವಿವರ: (26/1/2022)

ಈ ದಿನ ತಾತ್ಕಾಲಿಕವಾಗಿ ರಜೆ ಘೋಷಿಸಿರುವ ಶಾಲೆಗಳು : 06
ಇಲ್ಲಿಯವರೆಗೆ : 25+6=31
ಇತರೆ :
ಪ್ಯಾರಾ ಮೆಡಿಕಲ್ ಕಾಲೇಜು : 01
ಪಿ. ಯು ಕಾಲೇಜು(ವಸತಿ ಶಾಲೆಗಳು ಸೇರಿ) : 07+3(ಈ ದಿನ)= 10
ಒಟ್ಟು = 42

ಜಿಲ್ಲೆಯಲ್ಲಿ 55,472 ಮಂದಿಗೆ ಇಲ್ಲಿವರೆಗೆ ಕೊರೊನಾ ಸೊಂಕು ತಗುಲಿದೆ. 52,400 ಮಂದಿ ಗುಣಮುಖರಾಗಿದ್ದಾರೆ. 610 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!