ದಾವಣಗೆರೆ ಜಿಲ್ಲೆಯಲ್ಲಿ ಇಂದು 25 ಕೊವಿಡ್ ಸೊಂಕಿತರು ಪತ್ತೆ.! 55 ವರ್ಷದ ಓರ್ವ ವ್ಯಕ್ತಿ ಸಾವು

Davanagere districts covid cases updates garudavoice

ದಾವಣಗೆರೆ: ಜಿಲ್ಲೆಯಲ್ಲಿ ಇಂದು 25 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಹಾಗೂ ಓರ್ವ ಹರಪನಹಳ್ಳಿ ಜಿಲ್ಲೆಯ ಓರ್ವ ವ್ಯಕ್ತಿ ಸಾವು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇಂದು ಜಿಲ್ಲೆಯಲ್ಲಿ 237 ಜನರಿಗೆ ಆರ್ ಟಿ ಪಿ ಸಿ ಆರ್ ಹಾಗೂ ರ್ಯಾಪಿಡ್ ಟೆಸ್ಟ್ ಮಾಡಲಾಗಿದ್ದು 5 ಜನ ದಾವಣಗೆರೆ ತಾಲ್ಲೂಕಿನವರಿಗೆ ಹಾಗೂ ಹರಿಹರದ 6 ಜನರಿಗೆ, ಚನ್ನಗಿರಿಯ 4, ಹೊನ್ನಾಳಿಯ 8 ಜನರಿಗೆ ಕೊವಿಡ್ ಪಾಸಿಟಿವ್ ದೃಡಪಟ್ಟಿದೆ.

ದಾವಣಗೆರೆಯಲ್ಲಿ 30 ಹರಿಹರದ 54 ಜನರಿಗೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 125 ಜನ ಆಕ್ಟಿವ್ ಕೊವಿಡ್ ಪಾಸಿಟಿವ್ ರೋಗಿಗಳಿದ್ದಾರೆ.

 

ಹಲವು ದಿನಗಳಿಂದ ಜಿಲ್ಲೆಯಲ್ಲಿ ಕೊವಿಡ್ ಕೇಸ್ ಗಳು ದಿನೇ ದಿನೇ ಏರಿಕೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕೇಳಿದ್ದಾರೆ.

ಸಾರ್ವಜನಿಕರು ಕೊವಿಡ್ ನಿಯಮಾವಳಿಗಳನ್ನು ಪಾಲಿಸುವಂತೆ ಜಿಲ್ಲಾಡಳಿತ ಹೇಳುತ್ತಿದ್ದು, ಸಧ್ಯ ಪ್ರತಿದಿನಕ್ಕೆ 300 ಜನರಿಗೆ ಮಾತ್ರ ಕೊವಿಡ್ ಟೆಸ್ಟ್ ಪರೀಕ್ಷೆ ಮಾಡಲು ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮಾಹಿತಿ ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!