ಜಿಎಂಐಟಿಯ 26 ವಿದ್ಯಾರ್ಥಿಗಳು ಸಂದರ್ಶನ ಪ್ರಕ್ರಿಯೆಯಲ್ಲಿ ಆಯ್ಕೆ

ಜಿಎಂಐಟಿಯ 26 ವಿದ್ಯಾರ್ಥಿಗಳು ಸಂದರ್ಶನ ಪ್ರಕ್ರಿಯೆಯಲ್ಲಿ ಆಯ್ಕೆ

ದಾವಣಗೆರೆ: ಡಿಲೆನ್ಸಿ ಟೆಕ್ನಾಲಜಿ ಕಂಪನಿಗೆ 10 ವಿದ್ಯಾರ್ಥಿಗಳು, ಆಪ್ಟಂ ಕಂಪನಿಗೆ 15 ವಿದ್ಯಾರ್ಥಿಗಳು ಮತ್ತು ಕಿರ್ಲೋಸ್ಕರ್ ಫೆರಸ್ ಕಂಪನಿಗೆ ಮೂರು ವಿದ್ಯಾರ್ಥಿಗಳು ಆಯ್ಕೆ ಇತ್ತೀಚಿಗೆ ನಡೆದ ಮೂರು ಕಂಪನಿಗಳ ಸಂದರ್ಶನ ಪ್ರಕ್ರಿಯೆಯಲ್ಲಿ ಜಿಎಂಐಟಿಯ ಅಂತಿಮ ವರ್ಷದ 26 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಸಂಜಯ್ ಪಾಂಡೆ ಎಂಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಷ್ಠಿತ ಕಂಪನಿಗಳಾದ ಡಿಲೆನ್ಸಿ ಟೆಕ್ನಾಲಜಿ ಕಂಪನಿಗೆ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿಭಾಗದ 10 ವಿದ್ಯಾರ್ಥಿಗಳು, ಆಪ್ಟಂ ಕಂಪನಿಗೆ ಬಯೋಟೆಕ್ನಾಲಜಿ ಇಂಜಿನಿಯರಿಂಗ್ ವಿಭಾಗದ 15 ವಿದ್ಯಾರ್ಥಿಗಳು ಮತ್ತು ಕಿರ್ಲೋಸ್ಕರ್ ಫೆರಸ್ ಕಂಪನಿಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮೂರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಇನ್ನೂ 14 ಕಂಪನಿಗಳು ಸರದಿಯಲ್ಲಿದ್ದು, ಅವುಗಳಲ್ಲಿ ಜೆಪಿ ಮಾರ್ಗನ್, ಸಿಮೆನ್ಸ್, ಪ್ರೋಚಾಂಟ್, ಬಿ ಎಫ್ ಡಬ್ಲ್ಯೂ, ಹಿಟಾಚಿ, ತಯಾನ ಸಾಫ್ಟ್ವೇರ್, ಸ್ನಡರ್ ಎಲೆಕ್ಟ್ರಿಕ್, ಅಕಾರ್ಡ ಸಾಫ್ಟ್ವೇರ್, ಸುಗಪಿ ಇಂಜಿನ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಮುಂತಾದ ಪ್ರತಿಷ್ಠಿತ ಕಂಪನಿಗಳ ಆಗಿವೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ತಿಳಿಸಿದರು.

ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಕಾಲೇಜಿನ ಚೇರ್ಮನ್ ಶ್ರೀ ಜಿಎಂ ಲಿಂಗರಾಜು, ಆಡಳಿತ ಅಧಿಕಾರಿ ಶ್ರೀ ವೈ ಯು ಸುಭಾಷ್ ಚಂದ್ರ, ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂಬಿ, ಉದ್ಯೋಗಾಧಿಕಾರಿ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್, ಇಸಿಇ ವಿಭಾಗದ ಮುಖ್ಯಸ್ಥರಾದ ಡಾ ಪ್ರವೀಣ್ ಜೆ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ ಶ್ರೀನಿವಾಸ್ ಸಿವಿ, ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥರಾದ ಡಾ ಪ್ರಕಾಶ್, ಪ್ಲೇಸ್ಮೆಂಟ್ ಸಂಯೋಜಕರುಗಳಾದ ಶ್ರೀ ಸಂಪತ್ ಕುಮಾರ್, ಪ್ರಶಾಂತ್ ಮತ್ತು ರಾಕೇಶ್ ಹಾಗೂ ಅಧ್ಯಾಪಕ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!