ಕರ್ನಾಟಕದ 2 ನೇ ವಂದೇ ಭಾರತ್ ರೈಲಿಗೆ ಜೂನ್ 26 ರಂದು ಪ್ರಧಾನಿ ಚಾಲನೆ
ಬೆಂಗಳೂರು :ಕರ್ನಾಟಕದ 2ನೇ ವಂದೇ ಭಾರತ್ ರೈಲಿಗೆ (Bengaluru – Dharwad Via Davangere and Hubbali ), ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜೂನ್ 26 ರಂದು ಚಾಲನೆ ನೀಡಲಿದ್ದಾರೆ.
ನಮ್ಮ ದಾವಣಗೆರೆ ತಂಡದ ಪ್ರಸ್ತಾವನೆಗೆ ಸ್ಪಂದಿಸಿ ದೇಶದ ಹೆಮ್ಮೆಯ ವಂದೇ ಭಾರತ್ ರೈಲು ಸೇವೆಯನ್ನು ಬೆಂಗಳೂರು – ದಾರವಾಡ ಮಧ್ಯ ಭಾಗಕ್ಕೆ ಈ ಸೇವೆಯನ್ನು ಒದಗಿಸಿಕೊಟ್ಟ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ Namma Davanagere South Western Railway Passengers Commitee ( R ). ತಂಡದ ಪರವಾಗಿ ರೋಹಿತ್ ಜೈನ್ ಧನ್ಯವಾದಗಳನ್ನು ತಿಳಿಸಿದ್ದಾರೆ.
ವಂದೇ ಭಾರತ್ ರೈಲಿನ ಮಾಹಿತಿ:
ಮಂಗಳವಾರ ಹೊರತುಪಡಿಸಿ ಇನ್ನುಳಿದ ಎಲ್ಲಾ ದಿನ ಬೆಂಗಳೂರು-ಹುಬ್ಬಳ್ಳಿ-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದೆ.
ಬೆಂಗಳೂರಿನಿಂದ ವಂದೇ ಭಾರತ್ ರೈಲು ಪ್ರಯಾಣ ಆರಂಭಿಸಲಿದೆ. ಯಶವಂತಪುರ ರೈಲು ನಿಲ್ದಾಣ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಕಲ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಬೆಂಗಳೂರಿನಿಂದ ಹೊರಟರೆ ಯಶವಂತಪುರ, ದಾವಣಗೆರೆ, ಹುಬ್ಬಳ್ಳಿ ಸೇರಿದಂತೆ ಕೇವಲ ಮೂರು ಸ್ಟಾಪ್‌ಗಳಲ್ಲಿ ಮಾತ್ರ ಈ ರೈಲು ನಿಲುಗಡೆ ಮಾಡಲಿದೆ. ಬೆಳಗ್ಗೆ 5.45ಕ್ಕೆ ಬೆಂಗಳೂರು ನಗರ ರೈಲು ನಿಲ್ದಾಣದಿಂದ ವಂದೇ ಭಾರತ್ ರೈಲು ಸಂಚಾರ ಆರಂಭಗೊಳ್ಳಲಿದ್ದು, ಮಧ್ಯಾಹ್ನ 12.40ಕ್ಕೆ ಧಾರವಾಡ ತಲುಪಲಿದೆ. ಇನ್ನು ಧಾರವಾಡದಿಂದ ಮಧ್ಯಾಹ್ನ 1.15 ಕ್ಕೆ ವಂದೇ ಭಾರತ್ ರೈಲು ಹೊರಡಲಿದ್ದು, ರಾತ್ರಿ 8.10ಕ್ಕೆ ಬೆಂಗಳೂರು ತಲುಪಲಿದೆ.
ಬೆಂಗಳೂರು-ಹುಬ್ಬಳ್ಳಿ-ಧಾರವಾಡ ವಂದೇ ಭಾರತ್ ರೈಲು ಕರ್ನಾಟಕದ 2 ನೇ ವಂದೇ ಭಾರತ್ ರೈಲು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಮೊದಲು ಮೈಸೂರು-ಚೆನ್ನೈ ವಂದೇಭಾರತ್ ಆರಂಭಿಸಲಾಗಿತ್ತು. ಕರ್ನಾಟಕದಲ್ಲಿ ಜೂನ್ 26 ರಿಂದ ಕರ್ನಾಟಕದಲ್ಲಿ ಪ್ರತಿ ನಿತ್ಯ 2 ವಂದೇ ಭಾರತ್ ರೈಲು ಸಂಚಾರ ನಡೆಸಲಿದೆ.
ಏನು ವಿಶೇಷತೆ? ದೇಶದ ಅತಿ ವೇಗದ ರೈಲು ಇದಾಗಿದ್ದು, ಗಂಟೆಗೆ ಗರಿಷ್ಠ 160 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಐಷಾರಾಮಿ ವ್ಯವಸ್ಥೆ, ಸೀಟುಗಳನ್ನು ವಿಮಾನದ ರೀತಿ ನಿರ್ಮಿಸಲಾಗಿದೆ.
ಇದು ವಿಶ್ವದರ್ಜೆಯ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿದೆ. ಹವಾನಿಯಂತ್ರಿತ, ಎಕಾನಮಿ ಮತ್ತು ಪ್ರಿಮಿಯಂ ಕ್ಲಾಸ್‌ಗಳನ್ನು ಈ ರೈಲು ಹೊಂದಿದೆ. ವಂದೇ ಭಾರತ್ ರೈಲಿನಲ್ಲಿ ಆನ್‌ಬೋರ್ಡ್ ಉಪಾಹಾರದ ವ್ಯವಸ್ಥೆ ಇದೆ. ರೀಡಿಂಗ್ ಲೈಟ್ ವ್ಯವಸ್ಥೆ, ಸ್ವಯಂಚಾಲಿತ ಬಾಗಿಲು, ವೈಫೈ, ಮಾಹಿತಿ ವ್ಯವಸ್ಥೆ, ಚಾರ್ಜಿಂಗ್ ಪಾಯಿಂಟ್, ಸಿಸಿ ಕ್ಯಾಮೆರಾ, ಬಯೋ ಶೌಚಾಲಯ ವ್ಯವಸ್ಥೆ ಇದೆ