ದಾವಣಗೆರೆ: ತಾಲ್ಲೂಕಿನ 6ನೇ ಕಲ್ಲು ಗ್ರಾಮದ ರವಿಕುಮಾರ್ ಬಿನ್ ಜಯಪ್ಪ ಎಂಬವವರಿಗೆ ಸೇರಿದ ಸುಮಾರು 3 ಎಕರೆ ಕಬ್ಬು ಅಗ್ನಿಗಾಹುತಿಯಾದ ಘಟನೆ ಗುರುವಾರ ಸಂಭವಿಸಿದೆ.
ಅಗ್ನಿ ಶಾಮಕದಳದವರು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆದಾಗ್ಯೂ ಕೈಗೆ ಬಂದ ತುತ್ತು ಬಾಯಿಗೆ ಬಾರದಾಯಿತು ಎಂದು ಬೆಳೆನಷ್ಟಕ್ಕೊಳಗಾದ ರೈತರು ದುಃಖಿತರಾಗಿದ್ದರು.