ಜಾರಕಿಹೊಳಿ ಫೌಂಡೇಷನ್‌ನಿಂದ 360 ಬೆಂಚ್-ಡೆಸ್ಕ್ ವಿತರಣೆ

ದಾವಣಗೆರೆ: ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ 12 ಶಾಲೆಗಳಿಗೆ ಬೆಂಚ್ ಹಾಗೂ ಡೆಸ್ಕ್ ಸೆಟ್ ವಿತರಿಸಲಾಗುತ್ತಿದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ ಹೇಳಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ ಹಾಗೂ ಬಳ್ಳಾರಿ ಜಿಲ್ಲೆಗಳ 12 ಶಾಲೆಗಳಿಗೆ ಬೆಂಚ್ ಹಾಗೂ ಡೆಸ್ಕ್ ಸೆಟ್ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಚನ್ನಗಿರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಗಳೂರು ಹಿರೇಮಲ್ಲನಹೊಳೆ ತಿರಮಲೇಶ್ವರ ಗ್ರಾಮಾಂತರ ಪ್ರೌಢಶಾಲೆ, ಹರಪನಹಳ್ಳಿ ತಾಲ್ಲೂಕು ತಿಲಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿತ್ರದುರ್ಗದ ಗುರುಕುಲ ಪ್ರೌಢಶಾಲೆ, ಹರಿಹರದ ಅಂಜುಮಾನ್ ಹೈಸ್ಕೂಲ್, ಮುಕ್ತೇನಹಳ್ಳಿಸ.ಹಿ.ಪ್ರಾ ಶಾಲೆ, ಹಾವೇರಿ ಕುನ್ನೂರು ಸರ್ಕಾರಿ ಪ್ರೌಢಶಾಲೆ, ರಾಣೇಬೆನ್ನೂರು ಐರಣಿಯ ಶ್ರೀ ಗುರು ಪರಮಹಂಸ ಮುಪ್ಪಿನಾರ್ಯ ಸ್ವಾಮೀಜಿ ವಸತಿ ಪ್ರೌಢಶಾಲೆ, ದಾವಣಗೆರೆಯ ಮಲ್ಲಿಕಾರ್ಜುನ ಬಡಾವಣೆಯ ಸ.ಹಿ.ಪ್ರಾ ಶಾಲೆ, ಹಾನಗಲ್ ಅಕ್ಕಿ ಆಲೂರು ಜ್ಞಾನಭಾರತಿ ಇಂಗ್ಲೀಷ್ ಮೀಡಿಯಂ ಶಾಲೆ, ಶಿವಮೊಗ್ಗದ ಚೋರಾಡಿಯ ಸ.ಹಿ.ಪ್ರಾ.ಶಾಲೆ ಹರಿಹರ ತಾ.ಹನಗವಾಡಿಯ ಸಾ.ಹಿ.ಪ್ರಾ ಶಾಲೆಯಲ್ಲಿ ಬೆಂಚ್ ಹಾಗಾ ಡೆಸ್ಕ್‌ಗಳನ್ನು ವಿತರಿಸಲಾಗುವುದು ಎಂದರು.
ಹಿಂದುಳಿದ ಸರ್ಕಾರಿ ಶಾಲೆ, ಪ್ರೌಢಶಾಲೆಗಳು ಹಾಗೂ ಹಳ್ಳಿಗಳಲ್ಲಿರುವ ಶಾಲೆಗಳನ್ನು ಗುರುತ್ಸಿ ಒಟ್ಟು 600 ಸೆಟ್‌ಗಳನ್ನು ವಿತರಿಸುವ ಉದ್ದೇಶ ಹೊಂದಲಾಗಿದೆ. ಇದರ ಮೊದಲ ಕಂತಿನಲ್ಲಿ 12 ಶಾಲೆಗಳಿಗೆ ಪ್ರತಿ ಶಾಲೆಗೆ 30 ಸೆಟ್‌ಗಳಂತೆ 360 ಸೆಟ್ ಗಳನ್ನು ವಿತರಿಸಲಾಗುತ್ತಿದೆ. ಫೌಂಡೇಷನ್ ವತಿಯಿಂದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಸುದ್ದಿಗೋಗೋಷ್ಠಿಯಲ್ಲಿ ತೋಳಿ ಭರಮಣ್ಣ, ರಘು ದೊಡ್ಮನಿ, ಮಾಡಾಳು ಶಿವಕುಮಾರ್, ರಮೇಶ್, ಹನುಮಂತಪ್ಪ, ಕರಿಯಪ್ಪ ಮಾಳಿಗೇರ ಉಪಸ್ಥಿತರಿದ್ದರು.