4.50 ಲಕ್ಷ ರೂ. ನುಂಗಿದ `ಮನೆ ಬಾಡಿಗೆಗೆ ಇದೆ’ ಜಾಹೀರಾತು

ದಾವಣಗೆರೆ: ‘ಮನೆ ಬಾಡಿಗೆಗೆ ಇದೆ’ ಎಂದು ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ನೀಡಿ ಮಹಿಳೆಯೊಬ್ಬರು 4.50,442 ಕಳೆದುಕೊಂಡಿದ್ದಾರೆ.
ಲೀಲಾ ಹಾವೇರಿ ಹಣ ಕಳೆದುಕೊಂಡವರು. ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ನೋಡಿದ ಅಪರಿಚಿತನೊಬ್ಬ ಪಾನ್, ಆಧಾರ್ ಕಾರ್ಡ್ ಅನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿಕೊಡಿ 10,000 ಹಾಕುತ್ತೇನೆ ಎಂದು ಹೇಳಿದ್ದಾನೆ.
ಇದನ್ನು ನಂಬಿದ ಲೀಲಾ ಹಾವೇರಿ ಅವರು ವಾಟ್ಸ್ ಆ್ಯಪ್ ಮೂಲಕ ಆಧಾರ್ ಹಾಗೂ ಪಾನ್ ಕಾರ್ಡ್ ಕಳುಹಿಸಿಕೊಟ್ಟಿದ್ದಾರೆ. ದಾಖಲೆ ಪಡೆದುಕೊಂಡ ಅಪರಿಚಿತ ವ್ಯಕ್ತಿಗಳು ಲೀಲಾ ಅವರ ಎಸ್‌ಬಿಐ ಖಾತೆಗೆ ಎಸ್‌ಬಿಐ ಯೊನೊ ಆ್ಯಪ್‌ನ ಕ್ವಿಕ್ ಪೇ ಮೂಲಕ 10 ಹಣ ಹಾಕಿದ್ದಾನೆ. ಬಳಿಕ ಲೀಲಾ ಅವರ ಎಸ್‌ಬಿಐ ಖಾತೆಯಿಂದ ಹಂತ ಹಂತವಾಗಿ 4.50 ಲಕ್ಷವನ್ನು ಆನ್‌ಲೈನ್ ಮುಖಾಂತರ ಅಪರಿಚಿತ ವ್ಯಕ್ತಿ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.
ಲೀಲಾ ಅವರ ಅತ್ತೆ ನಿಟುವಳ್ಳಿಯ ಶಿವಬಸವ್ವ ಕಲಕೋಟಿ ಅವರು ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.