43 ಸಿಇಎನ್ (ಸೈಬರ್ ಠಾಣೆ) ಠಾಣಾಧಿಕಾರಿಗಳ ಹುದ್ದೆ, ಡಿವೈಎಸ್ಪಿ ದರ್ಜೆಗೆರಿಸಿ ಸರ್ಕಾರ ಆದೇಶ
ಬೆಂಗಳೂರು: 43 ಸಿಇಎನ್ ಠಾಣಾಧಿಕಾರಿಗಳ ಹುದ್ದೆಯನ್ನು ಡಿವೈಎಸ್ಪಿ ದರ್ಜೆಗೆ, ಒಂದು ಪಿಎಸ್‌ಐ ಹುದ್ದೆಯನ್ನು ಇನ್ ಪೆಕ್ಟರ್ ದರ್ಜೆಗೇರಿಸಿ ಮಂಗಳವಾರ ಅಧಿಕೃತ ಆದೇಶ ಹೊರಡಿಸಿದ್ದು, ಮುಂದಿನ ದಿನಗಳಲ್ಲಿ ಡಿವೈಎಸ್ಪಿಗಳ ಅಧೀನದಲ್ಲಿ ಸಿಇಎನ್ ಠಾಣೆಗಳು ಕಾರ್ಯ ನಿರ್ವಹಿಸಲಿವೆ.
ಸೈಬರ್ ಅಪರಾಧ, ಮಾದಕ ವಸ್ತುಗಳ ಮಾರಾಟ ಹಾಗೂ ಆರ್ಥಿಕ ವಂಚನೆ ಪ್ರಕರಣಗಳ ತ್ವರಿತ ತನಿಖೆ ಸಲುವಾಗಿ ರಾಜ್ಯದ 43 ಸಿಇಎ್ ಪೊಲೀಸ್ ಠಾಣೆಗಳ ಠಾಣಾಧಿಕಾರಿ ಹುದ್ದೆಗಳನ್ನು ಡಿವೈಎಸ್ಪಿ ಮೇಲ್ದರ್ಜೆಗೇರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮಾನವ ಕಳ್ಳಸಾಗಾಣಿಕೆ, ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ, ಕೋಕಾ ಕಾಯ್ದೆ, ಇ-ಡ್ರಗ್ ದಂಧೆಗಳ ವಿರುದ್ಧವೂ ಪ್ರಕರಣ ದಾಖಲಿಸಲು ಸಿಇಎನ್ ಠಾಣೆಗಳಿಗೆ ಅಧಿಕಾರವಿತ್ತು. ಆದರೆ ಈ ಪ್ರಕರಣಗಳ ಆಯಾ ಉಪ ವಿಭಾಗದ ಎಸಿಪಿ-ಡಿವೈಎಸ್ಪಿಗಳ ಅನುಮತಿ ಪಡೆದೇ ಇನ್‌ಸ್ಪೆಕ್ಟರ್‌ಗಳು ಕಾರ್ಯಾಚಾರಣೆ ನಡೆಸಬೇಕಿತ್ತು. ಹೀಗಾಗಿ ಇನ್‌ಸ್ಪೆಕ್ಟರ್‌ಗಳು ಕೋಕಾ, ಮಾನವ ಕಳ್ಳ ಸಾಗಾಣಿಕೆಯಂತಹ ಅಪರಾಧಗಳ ಕುರಿತು ಹೆಚ್ಚಿನ ಗಮನ ಹರಿಸುತ್ತಿರಿಲಲ್ಲ ಎಂಬ ಅಪವಾದಗಳು ಕೇಳಿ ಬಂದಿದ್ದವು.
ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಸಿಇಎನ್ ಠಾಣೆಗಳನ್ನು ಡಿವೈಎಸ್ಪಿ ಅಧಿಕಾರಿಗಳ ಉಸ್ತುವಾರಿಗೆ ವಹಿಸಲು ನಿರ್ಧಿರಿಸ ಕಳುಹಿಸಿದ್ದ ಪ್ರಸ್ತಾವನೆಗೆ ಒಳಾಳಿತ ಇಲಾಖೆ ಅನುಮತಿಸಿದೆ.
ಸಿಇಎನ್ ಠಾಣೆಯ ಅಧಿಕಾರಗಳೇನು ? : ಅಬಕಾರಿ ಕಾಯ್ದೆ, ಕಾನೂನು ಬಾಹಿರ ಚಟುವಟಿಕೆಗಳ ತಜೆ ಕಾಯ್ದೆ (ಯುಎಪಿಎ), ಕರ್ನಾಟಕ ಸಂಘಟಿತ ಅಪರಾಧ, ಕಾಯ್ದೆ (ಕೋಕಾ) ಮಾಹಿತಿ ತಂತ್ರಜ್ಞಾನ ಕಾಯ್ದೆ 50 ಲಕ್ಷ ರೂ.ಗಳಿಗೊ ಹೆಚ್ಚಿನ ವಂಚನೆ ( ಕೆಪಿಐಡಿ) ಅನಿಯಂತ್ರಿತ ಹೂಡಿಕೆ ಸ್ಕಾಂ (ಯೋಜನೆ) ರದ್ದು ಕಾಯ್ದೆ. ಮಾನವ ಕಳ್ಳಸಾಗಾಣಿಕೆ, ಆಸಿಡ್ ದಾಳಿ ಕುರಿತ ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸುತ್ತಿರುವ ಅಧಿಕಾರ ಸಿಇಎನ್ ಠಾಣೆಗೆ ನೀಡಲಾಗಿದೆ.