472 ಕೈದಿಗಳಿಗೆ ಮರಣದಂಡನೆ

472 ಕೈದಿಗಳಿಗೆ ಮರಣದಂಡನೆ

ನವದೆಹಲಿ : ದೇಶದ ವಿವಿಧ ಜೈಲುಗಳಲ್ಲಿ ಒಟ್ಟು 472 ಕೈದಿಗಳು ಮರಣದಂಡನೆಗೆ ಗುರಿಯಾಗಿದ್ದಾರೆ.

2021ರ ಡಿಸೆಂಬರ್‌ 31ರ ಅನ್ವಯ ಕೈದಿಗಳು ಮರಣದಂಡನೆಗೆ ಗುರಿಯಾಗಿದ್ದು, ಮುಂದಿನ ಕ್ರಮಕ್ಕಾಗಿ ಕಾಯಲಾಗುತ್ತಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಕುಮಾರ್‌ ಮಿಶ್ರ ಅವರು ಬುಧವಾರ ರಾಜ್ಯಸಭೆಗೆ ತಿಳಿಸಿದರು.

290 ಜನರಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಬದಲಿಸಲಾಗಿದೆ ಎಂದರು.

ಮರಣದಂಡನೆಗೆ ಗುರಿಯಾಗಿರುವ ಕೈದಿಗಳಲ್ಲಿ ಅತಿಹೆಚ್ಚಿನ ಸಂಖ್ಯೆಯ ಅಂದರೆ, ಒಟ್ಟು 67 ಕೈದಿಗಳು ಉತ್ತರಪ್ರದೇಶದ ಜೈಲುಗಳಲ್ಲಿ ಇದ್ದಾರೆ. ನಂತರದ ಸ್ಥಾನದಲ್ಲಿ ಬಿಹಾರ (46), ಮಹಾರಾಷ್ಟ್ರ (44), ಮಧ್ಯಪ್ರದೇಶ (39), ಪಶ್ಚಿಮ ಬಂಗಾಳ (37), ಜಾರ್ಖಂಡ್‌ (31) ಮತ್ತು ಕರ್ನಾಟಕ (27) ರಾಜ್ಯಗಳಿವೆ ಎಂದು ಅಜಯ್‌ ಕುಮಾರ್‌ ಲಿಖಿತ ಉತ್ತರದಲ್ಲಿ ತಿಳಿಸಿದರು.

ಮರಣದಂಡನೆ ಕಡಿತಗೊಳಿಸಿ ಜೀವಾವಧಿ ಶಿಕ್ಷೆ ವಿಧಿಸಲಾಗಿರುವ 290 ಕೈದಿಗಳ ಪೈಕಿ ಮಧ್ಯಪ್ರದೇಶದಲ್ಲಿ 46 ಕೈದಿಗಳು, ಮಹಾರಾಷ್ಟ್ರ (35), ಉತ್ತರಪ್ರದೇಶ (32), ಬಿಹಾರ (30), ಕರ್ನಾಟಕ (19), ಪಶ್ಚಿಮ ಬಂಗಾಳ (19) ಮತ್ತು ಗುಜರಾತ್‌ (18) ಕೈದಿಗಳಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!