10 ವರ್ಷದ ಬಾಲಕನಿಗೆ ಥಲಸ್ಸೆಮಿಯಾ ಚಿಕಿತ್ಸೆಗೆ 50 ಲಕ್ಷ ಖರ್ಚು: ಸಹಾಯಕ್ಕೆ ತಂದೆಯ ಮನವಿ
ಹಾವೇರಿ :ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕು ತುಮ್ಮಿನಕಟ್ಟೆ ಗ್ರಾಮದಲ್ಲಿ ಬೇಕರಿ ವ್ಯಾಪಾರ ಮಾಡುತ್ತಿರುವ ಸಂತೋಷ್ ಕುಮಾರ್ ಎಂಬುವವರ ಮಗ ಕೃಷ್ಣನಿಗೆ ಥಲಸ್ಸೇಮಿಯಾ ಎಂಬ ಆರೋಗ್ಯ ಸಮಸ್ಯೆ ಇದ್ದು, ಚಿಕಿತ್ಸೆಗಾಗಿ ಸುಮಾರು 50 ಲಕ್ಷ ರೂ. ಬೇಕಾಗಿದ್ದು, ದಾನಿಗಳು ಸಹಾಯ ಮಾಡುವಂತೆ ಸಂತೋಷ್ ಕುಮಾರ್ ಮನವಿ ಮಾಡಿದ್ದಾರೆ.
10 ವರ್ಷದ ನನ್ನ ಮಗ ಕೃಷ್ಷ ಹುಟ್ಟಿದ 6 ತಿಂಗಳಿನಿಂದಲೇ ಥಲಸ್ಸೆಮಿಯಾ ರೋಗಕ್ಕೆ ತುತ್ತಾಗಿದ್ದಾನೆ. ಆರಂಭದಲ್ಲಿ ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಈಗ ಬೆಂಗಳೂರಿನ ಎನ್.ಹೆಚ್. ಮಂಜುಂದಾರ್ ಷಾ ಆಸ್ಪತ್ರೆಯಲ್ಲಿ ಈಗ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಕಾಯಿಲೆ ಇದ್ದವರಿಗೆ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಚಿಕಿತ್ಸೆ ಅಗತ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕಳೆದ 9 ವರ್ಷಗಳಿಂದ ಮಗುವಿಗೆ ಪ್ರತಿ ತಿಂಗಳು ಕನಿಷ್ಟ 10 ರಿಂದ 15 ಸಾವಿರ ರೂ. ಹಣ ವೆಚ್ಚ ಮಾಡುತ್ತಿದ್ದು, ಥಲೆಸ್ಸೆಮಿಯಾಗೆ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಚಿಕಿತ್ಸೆ ಅಗತ್ಯವಿದೆ. ಈಗ ನನ್ನ ಮಗಳ HLA ಮ್ಯಾಚ್ ಆಗಿದ್ದು, ಇದರ ಆಪರೇಷನ್ ಹಾಗೂ ಚಿಕಿತ್ಸೆಗೆ 22 ಲಕ್ಷ ರೂ. ಖರ್ಚಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ನಂತರ ಮಗುವನ್ನು ಒಂದು ವರ್ಷ ಅದೇ ಆಸ್ಪತ್ರೆಯಲ್ಲಿಟ್ಟು ಚಿಕಿತ್ಸೆ ಮುಂದುವರೆಸಬೇಕಾಗುತ್ತದೆ. ಇದೆಲ್ಲಾ ಸೇರಿ 40 ರಿಂದ 50 ಲಕ್ಷ ರೂ. ಖರ್ಚಾಗುವ ಸಾಧ್ಯತೆ ಇದ್ದು, ದಾನಿಗಳು ಕೈಲಾದ ಸಹಾಯ ಮಾಡಿ, ಮಗುವಿನ ಜೀವ ಉಳಿಸಲು ಸಹಾಯ ಮಾಡುವಂತೆ ಅವರು ವಿನಂತಿಸಿದ್ದಾರೆ.
Master Krishna S.S.
SB A/C No. 8162500100346501
Ukkadagathri-581119, Harihar Taluk, Davangere Distrit.
IFSC Code – KARB0000816
MICR Code – 581052534
ಮೇಲಿನ ಖಾತೆಗೆ ಹಣ ನೀಡಬುದೆಂದೂ, ಮಾಹಿತಿಗಾಗಿ ಸಂತೋಷ್ ಕುಮಾರ್ – 8151874714ಗೆ ಸಂಪರ್ಕಿಸುವಂತೆಯೂ ಅವರು ಕೋರಿದ್ದಾರೆ.