ಜೀವ ರಕ್ಷಕರಿಗೆ 5 ಸಾವಿರ ನಗದು ಬಹುಮಾನ ! ಜೀವರಕ್ಷಕರ ಆಯ್ಕೆಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚನೆ

jeeva rakshaka

ದಾವಣಗೆರೆ: ಕೇಂದ್ರ ಸರ್ಕಾರದ ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯದ ಮಾರ್ಗಸೂಚಿಗಳನುಸಾರ ಜೀವರಕ್ಷಕರನ್ನು ಆಯ್ಕೆ ಮಾಡಲು ರಾಜ್ಯ ಮಟ್ಟದಲ್ಲಿ ಯೋಜನೆಯ ಪರಿಶೀಲನಾ ಸಮಿತಿ ಮತ್ತು ಜಿಲ್ಲಾ ಮಟ್ಟದ ಮೌಲ್ಯಮಾಪನ ಸಮಿತಿಯನ್ನು ಮೇ.13ರ 2022ರಂದು ರಚಿಸಿ ಸರ್ಕಾರ ಆದೇಶಿಸಿದೆ.  ಸಾರ್ವಜನಿಕರಲ್ಲಿ ರಸ್ತೆ ಅವಘಾತಕ್ಕೆ ಒಳಗಾದ  ವ್ಯಕ್ತಿಗಳನ್ನು ಸುವರ್ಣ ಅವಧಿಯೊಳಗೆ ಸಹಾಯ ಮಾಡಿ, ಆಸ್ಪತ್ರೆಗೆ ಸಾಗಿಸುವಲ್ಲಿ ಪ್ರೇರೇಪಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ. ಪ್ರತಿ ಘಟನೆಗೆ ಜೀವರಕ್ಷಕರನಿಗೆ ರೂ. 5 ಸಾವಿರ ನಗದು ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

ಭಾರತ ಸರ್ಕಾರದ ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯವು ನೀಡಿರುವ ಮಾರ್ಗಸೂಚಿಯಂತೆ ಜೀವ ರಕ್ಷಕನನ್ನು ಆಯ್ಕೆ ಮಾಡಲು ಜಿಲ್ಲಾ ಮಟ್ಟದ ಮೌಲ್ಯಮಾಪನ ಸಮಿತಿಯನ್ನು ಮತ್ತು ರಾಜ್ಯ ಮಟ್ಟದಲ್ಲಿ ಪರಿಶೀಲನಾ ಸಮಿತಿಯನ್ನು ರಚಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಇವರ ಪತ್ರದಲ್ಲಿ, ಭಾರತ ಸರ್ಕಾರದ ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯವು ರಾಜ್ಯಮಟ್ಟದಲ್ಲಿ ಯೋಜನೆಯನ್ನು ಘೋಷಿಸಿ ಮಾರ್ಗದರ್ಶನವನ್ನು ನೀಡಿದ್ದು, ಈ ಯೋಜನೆಯು ದಿನಾಂಕ 15/10/2021 ರಿಂದ 31/03/2026ರವರೆಗೆ ಅನುಷ್ಠಾನದಲ್ಲಿರುತ್ತದೆ.

ಈ ಯೋಜನೆಯ ಅನುಷ್ಠಾನದ ಪ್ರಗತಿಯನ್ನು ಸಮಿತಿಯು ತ್ರೈಮಾಸಿಕವಾಗಿ ಸಭೆ ನಡೆಸಬೇಕು. ಜಿಲ್ಲೆಗಳಿಂದ ಶಿಫಾರಸುಗೊಂಡಿರುವ ಜೀವರಕ್ಷಕರಿಗೆ ನಗದು ಬಹುಮಾನವನ್ನು ಜಾಲತಾಣದ ಮುಖಾಂತರ ನೇರವಾಗಿ ಜೀವರಕ್ಷಕರ ಖಾತೆಗೆ ವರ್ಗಾಯಿಸಬೇಕು. ರಾಜ್ಯ ಮಟ್ಟದ ಸಮಿತಿಯು ಮೂರು ಅತ್ಯುತ್ತಮ ಪ್ರಸ್ತಾವನೆಗಳನ್ನು ರಾಷ್ಟç ಮಟ್ಟದ ಪ್ರಶಸ್ತಿಗಾಗಿ ಪ್ರತೀ ವರ್ಷ ಸೆಪ್ಟೆಂಬರ್ 30 ಅಥವಾ MoRTH ನಿರ್ಧರಿಸುವ ದಿನಾಂಕದೊಳಗೆ ಸಲ್ಲಿಸಬೇಕು.

ವ್ಯಾಪ್ತಿಯ ಪೊಲೀಸ್ ಅಧಿಕಾರಿಯು, ವೈದ್ಯರಿಂದ ವಿವರಗಳನ್ನು ದೃಢಪಡಿಸಿ ಜೀವರಕ್ಷಕನಿಗೆ ತಮ್ಮ ಕಚೇರಿಯ ಪತ್ರ ಮುದ್ರಿಕೆಯಲ್ಲಿ ಪ್ರಕರಣ ಪತ್ರವನ್ನು ನೀಡಿ ಅದರ ಪ್ರತಿಯನ್ನು ಜಿಲ್ಲಾ ಮಟ್ಟದ ಮೌಲ್ಯಮಾಪನ ಸಮಿತಿಗೆ ಸಲ್ಲಿಸುವುದು. ಈ ಸಮಿತಿಯು ತಿಂಗಳಿಗೊಮ್ಮೆ ಸಭೆ ನಡೆಸಿ, ಜೀವರಕ್ಷಕರ ವಿವರವನ್ನು ಪರಿಶೀಲಿಸಿ ಅನುಮೋದಿಸಿ, ಆಯುಕ್ತರು ಸಾರಿಗೆ ಇಲಾಖೆಗೆ ಸಲ್ಲಿಸಬೇಕೆಂದು ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್ ಆದೇಶದಲ್ಲಿ ಸೂಚಿಸಿದ್ದಾರೆ.

ರಾಜ್ಯ ಮಟ್ಟದ ಯೋಜನೆಯ ಪರಿಶೀಲನಾ ಸಮಿತಿ:
ಒಳಾಡಳಿತ ಇಲಾಖೆ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರಾಗಿ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಹಾಗೂ ಆಯುಕ್ತರು, ಸಂಚಾರ ಮತ್ತು ರಸ್ತೆ ಸುರಕ್ಷತೆ ಇವರು ಸದಸ್ಯರಾಗಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಸದಸ್ಯರಾಗಿ ಮತ್ತು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಜಿಲ್ಲಾ ಮಟ್ಟದ ಮೌಲ್ಯಮಾಪನ ಸಮಿತಿ:
ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳು ಸದಸ್ಯರಾಗಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

 

 

gಚಿಡಿuಜಚಿvoiಛಿe21@gmಚಿiಟ.ಛಿom 9740365719

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!