ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ 6000 ಸರ್ಜಿಕಲ್ ಮಾಸ್ಕ್ ವಿತರಿಸಿದ ಸ್ಕೌಟ್- ಗೈಡ್ಸ್ ಸಂಸ್ಥೆ

ದಾವಣಗೆರೆ ಜು.16; ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆಯಲಿರುವ ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಾವಣಗೆರೆ ಜಿಲ್ಲಾ ಸಂಸ್ಥೆ ವತಿಯಿಂದ 6000 ಸರ್ಜಿಕಲ್ ಮಾಸ್ಕ್ನ್ನು ದಾವಣಗೆರೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪರಮೇಶ್ವರಪ್ಪ ಇವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸ್ಕೌಟ್ ಆಯುಕ್ತ ಎಪಿ ಷಡಕ್ಷರಪ್ಪ, ಜಿಲ್ಲಾ ಕಾರ್ಯದರ್ಶಿ ರತ್ನ , ಉತ್ತರ ವಲಯ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಹಾಲಪ್ಪ, ಯುವ ಸಮಿತಿ ಅಧ್ಯಕ್ಷ ಅಶ್ವಿನಿ ಎಸ್.ಜಿ.ವಿ. ಮತ್ತು ಮುಸ್ತಾಫ್ ರಾಜ್ ಉಪಸ್ಥಿತರಿದ್ದರು.