ಪರಿಶಿಷ್ಟ ವರ್ಗಕ್ಕೆ ಶೇ.7.5 ಮೀಸಲಾತಿ ನೀಡದಿದ್ದರೆ ಹಳ್ಳಿ ಹಳ್ಳಿಗಳಲ್ಲಿ ಉಗ್ರಹೋರಾಟ!

ಮೀಸಲಾತಿ ತೆಗೆಯುವ ಕುತಂತ್ರ ಬಿಡಬೇಕು :ಪರಿಶಿಷ್ಟ ವರ್ಗಕ್ಕೆ ನ್ಯಾಯ ಕೊಡಬೇಕು, ಪುಣ್ಯಾನಂದಪುರಿ ಸ್ವಾಮೀಜಿಗಳಿಗೆ ನಾಯಕರ ನಮನ.
ದಾವಣಗೆರೆ/ ರಾಜನಹಳ್ಳಿ: ಪರಿಶಿಷ್ಟ ವರ್ಗಕ್ಕೆ ಈ ಬಾರಿ ಶೇ.7.5 ಮೀಸಲಾತಿ ನೀಡದಿದ್ದರೆ ರಾಜ್ಯದ ಮೂಲೆ ಮೂಲೆಯ ಹಳ್ಳಿ ಹಳ್ಳಿಗಳಿಂದ ಉಗ್ರ ಹೋರಾಟಕ್ಕೆ ವೇದಿಕೆ ಸಜ್ಜುಗೊಳಿಸಲು ವಾಲ್ಮೀಕಿ ಸಮುದಾಯ ತೀರ್ಮಾನಿಸಿತು.ದಾವಣಗೆರೆ ಜಿಲ್ಲೆಯ ವಾಲ್ಮೀಕಿ ಗುರುಪೀಠ ರಾಜನಹಳ್ಳಿ ಆಶ್ರಮದಲ್ಲಿ ವಾಲ್ಮೀಕಿ ಗುರುಪೀಠದ ಸಂಸ್ಥಾಪಕರಾದ ಪುಣ್ಯಾನಂದಪುರಿ ಸ್ವಾಮೀಜಿಯವರು 14ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಾಲ್ಮೀಕಿ ದರ್ಮದರ್ಶಿಗಳು, ಪ್ರಮುಖ ಮುಖಂಡರ ಸಭೆಯಲ್ಲಿ ಪುಣ್ಯಾನಂದಪುರಿ ಶ್ರೀಗಳ ಸ್ಮರಣೆ ಮಾಡಲಾಯಿತು. ಈ ಸಮಯದಲ್ಲಿ ಮೀಸಲಾತಿ ಬಗ್ಗೆ ಚರ್ಚೆ ಆರಂಭವಾಯಿತು. ಆಗ ಮಾತನಾಡಿದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ನಮ್ಮ ಸಮುದಾಯದ ನಾಯಕರಿಗೆ ಮೊದಲು ಬುದ್ದಿ ಬರಬೇಕು. ಒಬ್ಬರಿಗೂ ಚಳವಳಿಯ ಬಗ್ಗೆ, ಸಮುದಾಯದ ಹಿತದ ಬಗ್ಗೆ ಕಾಳಜಿ ಇಲ್ಲ. ನಾನೇ ಹಲವು ಬಾರಿ ವಿಧಾನ ಸೌಧದ ಮೆಟ್ಟಿಲು ಹತ್ತಿದರೂ ಸ್ಪಂದಿಸುತ್ತಿಲ್ಲ. ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡುತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಒತ್ತಡ ಹೇರಲು ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತ್ರಿಸದಸ್ಯ ಸಮಿತಿಯಿಂದ ಕೈ ಬಿಡಲು ಒತ್ತಾಯ:
ಪರಿಶಿಷ್ಟ ವರ್ಗದ ಮೀಸಲಾತಿ ಪ್ರಮಾಣ ಹೆಚ್ಚಿಸಲು ಆಗ್ರಹಿಸಿ 30 ವರ್ಷದಿಂದ ಹೋರಾಟ ನಢಯುತ್ತಿದೆ. ನಾನು ಪಾದಯಾತ್ರೆ ಮಾಡಿದೆ. ಫ್ರೀಡಂ ಪಾರ್ಕ್ ನಲ್ಲಿ ಧರಣಿ ಕುಳಿತೆ. ಆದರೆ ನಮ್ಮವರೇ ನಾಯಕರು ಭರವಸೆ ನೀಡಿ ಹೋರಾಟ ಹಿಂಪಡೆಯುವಂತೆ ಮಾಡಿದರು. ಅದಾದ ಬಳಿಕ ಹಲವು ಬಾರಿ ಸಭೆ ನಡೆಸಿದರೂ ಪರಿಶಿಷ್ಟ ವರ್ಗ ಮದ ಮೀಸಲಾತಿ ವಿಚಾರವನ್ನ ತ್ರಿ ಸದಸ್ಯ ಸಮಿತಿ ವ್ಯಾಪ್ತಿಯಿಂದ ಹೊರಗಿಡಲು ಒತ್ತಡ ಹೇರಲು ಎಲ್ಲ ಶಾಸಕರಿಗೂ ಹಲವು ಸಭೆಗಳಲ್ಲಿ ಹೇಳಿದ್ದೇವೆ. ಆದರೆ ನಮ್ಮವರೇ ಸಮುದಾಯದ ಪರವಾದ ಬದ್ಧತೆ ಪ್ರದರ್ಶಿಸುತ್ತಿಲ್ಲ ಎಂದು ಪ್ರಸನ್ನಾನಂದಪುರಿ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್ ನಾಯಕ ಹೊದಿಗೆರೆ ರಮೇಶ್ ಮಾತನಾಡಿ, ಸಮುದಾಯವನ್ನ ಇಂದು ಹಲವು ಮಜಲುಗಳಲ್ಲಿ ಕಟ್ಟಿ ಬೆಳೆಸಬೇಕಿದೆ. ಇಂದು ಸಮಾಜ ಕಲ್ಯಾಣ ಇಲಾಖಡ ಸಚಿವರಾದ ಶ್ರೀರಾಮುಲು ಪ್ರತಿ ಭಾರಿ ಮೀಸಲಾತಿ ಪಡೆಯುತ್ತೇವೆ ಎನ್ನುತ್ತಿದ್ದಾರೆ. ಮೀಸಲಾತಿಗಾಗಿ ಸಂಪುಟ ಉಪ ಸಮಿತಿ ರಚಿಸಿರುವುದು ನಿಮ್ಮ ನೇತೃತ್ವದಲ್ಲಿ. ಆದರೆ ಮತ್ತೊಂದು ತ್ರಿ ಸದಸ್ಯ ಸಮಿತಿ ರಚನೆಗೆ ಯಾಕೆ ಅವಕಾಶ ಮಾಡಿಕೊಟ್ರಿ? ನಿಮಗೆ ಬುದ್ದಿ ಇರಲಿಲ್ಲವಾ? ಎಂದು ಪ್ರಶ್ನಿಸಿದರು.

ಒಬ್ಬ ಶಾಸಕರು ಕೂಡ ಸದನದಲ್ಲಿ ಶೇ.7.5 ಮೀಸಲಾತಿ ಬಗ್ಗೆ ಧ್ವನಿ ಎತ್ತಲಿಲ್ಲ. ಚರ್ಚೆಗೆ ಅವಕಾಶವನ್ನೂ ನೀಡಲಿಲ್ಲ. ಇದರ ಅರ್ಥ ತೆರೆ ಮರೆಯಲ್ಲಿ ದಲಿತ ನಾಯಕರನ್ನ ಪೌರೋಹಿತ್ಯ ಶಾಹಿ ವರ್ಗ ದಮನಗೊಳಿಸುವ ತಂತ್ರ ಮಾಡುತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳಿಗೆ ನೀಡುತ್ತಿರುವ ಮೀಸಲಾತಿ ಕಿತ್ತೊಗೆದು ಆರ್ಥಿಕ ಮೀಸಲಾತಿ ಜಾರಿಗೆ ತರುವ ಹುನ್ನಾರವನ್ನ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಆದ್ದರಿಂದ ಪರಿಶಿಷ್ಟ ಜಾತಿ ಹಾಗೂ ವರ್ಗದ ನಾಯಕರು ಒಟ್ಟಾಗಿ ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ಜಾಗೇ ಹೋರಾಟ ನಡೆಸಬೇಕು ಎಂದರು.
ಸುಪ್ರೀಂ ಕೋರ್ಟ್ ಇನ್ನು ಎಷ್ಟು ತಲೆಮಾರಿಗೆ ಮೀಸಲಾತಿ ನೀಡ್ತೀರಿ ಎಂದು ಕೇಳುತ್ತೆ. ಆದರೆ ಸರ್ಕಾರಗಳು ಎಲ್ಲಿ ಸಮಾನತೆಯ ಹಾದಿಯಲ್ಲಿ ಅಭಿವೃದ್ಧಿ ಕೆಲಸಗಳನ್ನ ಮಾಡಿವೆ? ಇವುಗಳನ್ನ ನ್ಯಾಯಾಲಯಗಳಿಗೂ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕು. ಒಂದು ಕಡೆ ಮೀಸಲಾತಿ ತೆಗೆಯುವ ಕುತಂತ್ರ ಮತ್ತೊಂದೆಡೆ ದಲಿತ ನಾಯಕರ ಧ್ವನಿ ಅಡಗಿಸುವ ಹುನ್ನಾರ ನಡೆಯುತ್ತಿರುವುದರ ವಿರುದ್ಧ ಜಾಗೃತರಾಗಬೇಕು ಎಂದು ಎಚ್ಚರಿಸಿದರು.
ನಾಯಕ ಸಮಾಜದ ಎಲ್ಲ ಶಾಸಕರು ಒಟ್ಟಾಗಬೇಕು. ಮೀಸಲಾತಿ ವಿಚಾರದಲ್ಲಿ ಸ್ಪಷ್ಟ ನಿಲುವು ತಳೆಯಬೇಕು. ಸಭೆ ಕರೆದಾಗೆಲ್ಲ ಶಾಸಕರು ತಪ್ಪಿಸಿಕೊಳ್ಳುತ್ತಾರೆ.
ಸುಪ್ರೀಂ ಕೋರ್ಟ್ ಇನ್ನು ಎಷ್ಟು ತಲೆಮಾರಿಗೆ ಮೀಸಲಾತಿ ನೀಡ್ತೀರಿ ಎಂದು ಕೇಳುತ್ತೆ. ಆದರೆ ಸರ್ಕಾರಗಳು ಎಲ್ಲಿ ಸಮಾನತೆಯ ಹಾದಿಯಲ್ಲಿ ಅಭಿವೃದ್ಧಿ ಕೆಲಸಗಳನ್ನ ಮಾಡಿವೆ? ಇವುಗಳನ್ನ ನ್ಯಾಯಾಲಯಗಳಿಗೂ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕು. ಒಂದು ಕಡೆ ಮೀಸಲಾತಿ ತೆಗೆಯುವ ಕುತಂತ್ರ ಮತ್ತೊಂದೆಡೆ ದಲಿತ ನಾಯಕರ ಧ್ವನಿ ಅಡಗಿಸುವ ಹುನ್ನಾರ ನಡೆಯುತ್ತಿರುವುದರ ವಿರುದ್ಧ ಜಾಗೃತರಾಗಬೇಕು ಎಂದು ಎಚ್ಚರಿಸಿದರು.ಸಭೆಯಲ್ಲಿ ಶಾಸಕರಾದ ರಾಮಚಂದ್ರಪ್ಪ, ಧರ್ಮದರ್ಶಿಗಳಾದ ಟಿ. ಓಬಳಪ್ಪ, ಡಾ. ವಾಲ್ಮೀಕಿ, ಡಾ. ಕೆ.ಆರ್. ಪಾಟೀಲ್, ಜಂಬಯ್ಯ ನಾಯಕ, ಎ.ಬಿ. ರಾಮಚಂದ್ರಪ್ಪ, ವೆಂಕಟರಮಣಪ್ಪ ಕೋಲಾರ, ಟ್ರಸ್ಟಿಗಳಾದ ಮಲ್ಲಪ್ಪ ಕೌಜಲಗಿ, ನಾಗರಾಜಪ್ಪ,
ಶಾಂತಕುಮಾರ್ ಸುರಪುರ, ಕಾಂಗ್ರೆಸ್ ನಾಯಕಿ ನಾಗವೇಣಿ, ತುಮಕೂರು ಜಿ.ಪಂ. ಮಾಜಿ ಅಧ್ಯಕ್ಷೆ ಕುಸುಮಾ ಜಗನ್ನಾಥ್, ಜಂಬೂರು ನಾಯಕರ ಪಡೆ ರಾಜ್ಯಾಧ್ಯಕ್ಷ ಹಾಗಲವಾಡಿ ಶಂಕರ್, ಸೈನಿಕ ಶಿವಾಜಿ, ರಾಮಚಂದ್ರ ಚಾ.ನಗರ ಮತ್ತಿತರರು ಉಪಸ್ಥಿತರಿದ್ದರು.
ಹಕ್ಕ-ಬುಕ್ಕರು ವಾಲ್ಮೀಕಿ ಸಮುದಾಯದವರು.
ಮುಮ್ಮಡಿ ಸೀಗನಾಯಕ ಅವರ ಮಗ ವೀರ ಕಂಪಿಲರಾಯ, ಅವರ ಮಗ ಗಂಡುಗಲಿ ಕುಮಾರರಾಮ, ಆತನ ಸೋದರಿ ಮಾರೆವ್ವ ನಾಯಕ ಸಮುದಾಯದ ಕುಡಿಗಳು. ಕುರಗೋಡು ಸಂಸ್ಥಾನದ ಭೂಪನಾಯಕ ಹಾಗೂ ಅವರ ಪುತ್ರ ಸಂಗಮ ವಂಶಸ್ತರು ನಾಯಕ ಸಂಗಮ ನಾಯಕ ಸಮುದಾಯದವರು. ಹೀಗಿದ್ದಮೇಲೆ ಮಾರೆವ್ವ – ಸಂಗಮನ ಮಕ್ಕಳಾದ ಹಕ್ಕ-ಬುಕ್ಕ ಹೇಗೆ ಬೇರೆ ಸಮುದಾಯದವರಾಗ್ತಾರೆ? ಹಕ್ಕ-ಬುಕ್ಕ ಇಬ್ಬರೂ ವಾಲ್ಮೀಕಿ ಸಮುದಾಯದವರು. ಇತ್ತೀಚೆಗೆ ಇತಿಹಾಸ ತಿರುಚಲಾಗುತ್ತಿದೆ. ಹೀಗಾಗಿ ರಾಜ್ಯದ ಎಲ್ಲಡೆ 18-04ರಂದು ವಿಜಯನಗರ ಸಾಮ್ರಾಜ್ಯ ಸಂಸ್ಥಾಪನ ದಿನವನ್ನ ಆಚರಿಸಬೇಕು ಎಂದು ಕರೆ ನೀಡಲು ಪ್ರಾಸ್ತಾವಿಕ ನುಡಿಯಲ್ಲಿ ಹರ್ತಿಕೋಟೆ ವೀರೇಂದ್ರ ಸಿಂಹ ಆಗ್ರಹಿಸಿದರು. ಅದನ್ನು ಸಭೆ ಒಪ್ಪಿಗೆ ಸೂಚಿಸಿತು.
ವಾಲ್ಮೀಕಿ ಜಾತ್ರಾ ಮಹೋತ್ಸವದ ಖರ್ಚು ವೆಚ್ಚಗಳ ಮಾಹಿತಿ
ಪ್ರಸನ್ನಾನಂದಪುರಿ ಸ್ವಾಮೀಜಿ ಸಭೆಯ ಮುಂದಿಟ್ಟರು. 2020ರಲ್ಲಿ 3.37 ಕೋಟಿ ಹಣ ಸಂಗ್ರಹವಾಗಿತ್ತು. ಆಗ ಜಾತ್ರಾ ಮಹೋತ್ಸವ ನಡೆಸಿ 1.61 ಕೋಟಿ ಉಳಿತಾಯ ಮಾಡಿದ್ದು, ಸಮುದಾಯದ ವಿದ್ಯಾರ್ಥಿಗಳಿಗೆ ಏಕಲವ್ಯ ವಿದ್ಯಾ ನಿಧಿಗಾಗಿ 1.5 ಕೋಟಿ ರೂ. ಫಿಕ್ಸೆಡ್ ಡೆಪಾಸಿಟ್ ಇಡಲಾಗಿದೆ. ಈ ಬಾರಿ ಜಾತ್ರಾ ಮಹೋತ್ಸವಕ್ಕೆ 2,02,73,859 ರೂ. ಸಂಗ್ರಹವಾಗಿದ್ದು, 1,72,79,788 ರೂ. ಉಳಿತಾಯ ಮಾಡಿರುವುದಾಗಿ ವಿವರಣೆ ನೀಡಿದರು.