ಭೀಮಾ ನದಿಯಲ್ಲಿ ಶವಗಳು ಪತ್ತೆ.! ಒಂದೇ ಕುಟುಂಬದ 7 ಜನರ ಸಾವು.!
ಪುಣೆ: ವೃದ್ಧ ದಂಪತಿ, ಅವರ ಮಗಳು, ಅಳಿಯ ಮತ್ತು ಮೂವರು ಮೊಮ್ಮಕ್ಕಳು ಸೇರಿದಂತೆ ಒಂದು ಕುಟುಂಬದ ಏಳು ಸದಸ್ಯರ ಮೃತ ದೇಹಗಳು ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಭೀಮಾ ನದಿ ಪಾತ್ರದಲ್ಲಿ ಪತ್ತೆಯಾಗಿವೆ.
ಜಿಲ್ಲೆಯ ಯಾವತ್ ಗ್ರಾಮದ ಬಳಿ ಭೀಮಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಪರ್ಗಾಂವ್ ಸೇತುವೆ ಬಳಿ ನಾಲ್ಕು ಮೃತದೇಹಗಳು ಸೋಮವಾರವೇ ಪತ್ತೆಯಾಗಿವೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಪ್ರತಿ ಮೃತದೇಹಗಳೂ 200ರಿಂದ 300 ಮೀಟರ್ ಅಂತರದಲ್ಲಿ ಪತ್ತೆಯಾಗಿವೆ. ಸಾವಿಗೆ ಕಾರಣ ಮತ್ತು ಸನ್ನಿವೇಶದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರು ಎಲ್ಲಾ ದೃಷ್ಟಿಕೋನದಲ್ಲೂ ತನಿಖೆ ನಡೆಸುತ್ತಿದ್ದಾರೆ. ಆತ್ಮಹತ್ಯೆ ಸಾಧ್ಯತೆ ಕುರಿತೂ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.