ದಾವಣಗೆರೆಯ ಜಿಎಂಐಟಿಗೆ 700 ಜಾಬ್ ಆಫರ್ಸ್! ಮಧ್ಯ ಕರ್ನಾಟಕದಲ್ಲಿ ಅತಿ ಹೆಚ್ಚು ಉದ್ಯೋಗಾವಕಾಶ ಒದಗಿಸಿದ ಸಂಸ್ಥೆ ಜಿಎಂಐಟಿ
ದಾವಣಗೆರೆ: ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ಲೇಸ್ಮೆಂಟ್ಸ್ ಮೊದಲ ಬಾರಿಗೆ ದಾಖಲೆಯ 700 ಜಾಬ್ ಆಫರ್ಸ್ ಪಡೆದಿದ್ದು, ಮಧ್ಯ ಕರ್ನಾಟಕದಲ್ಲೇ ಅತಿ ಹೆಚ್ಚು ಉದ್ಯೋಗಾವಕಾಶ ಒದಗಿಸಿದ ತಾಂತ್ರಿಕ ಮಹಾವಿದ್ಯಾಲಯವೆನಿಸಿದೆ. ಈ ಬಾರಿ ಐಟಿ ವಲಯದಲ್ಲಿ ಅತಿ ಹೆಚ್ಚು ಉದ್ಯೋಗಾವಕಾಶಗಳು ದೊರೆತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ವೈ. ವಿಜಯಕುಮಾರ್ ತಿಳಿಸಿದ್ದಾರೆ.
ಪ್ರತಿಷ್ಠಿತ ಕಂಪನಿಗಳಾದ ವಿಪ್ರೋ 124 ವಿದ್ಯಾರ್ಥಿಗಳನ್ನು, ಟಿಸಿಎಸ್ 31, ಇನ್ಫೋಸಿಸ್ 32, ಈವೈ 32, ಕ್ಯಾಪ್ಜೆಮಿನಿ 40, ಎನ್‌ಟಿಟಿ 13, ಎಸ್.ಎಲ್.ಕೆ. ಸಾಫ್ಟ್ವೇರ್ ಸರ್ವೀಸಸ್ 11, ಹೆಚ್.ಸಿ.ಎಲ್ ಟೆಕ್ನೋಲಜಿಸ್ 10, ರೋಬೋಸಾಫ್ಟ್ ಟೆಕ್ನೋಲಜಿಸ್ 7, ಐಸಿಐಸಿಐ ಬ್ಯಾಂಕ್ 16, ಗ್ಲೋಬಲ್ ಕ್ವೆಸ್ಟ್ 5, ಇನ್ನೂ ಅನೇಕ ಪ್ರತಿಷ್ಠಿತ ಕಂಪನಿಗಳು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದಲ್ಲದೆ ಮೆಕ್ಯಾನಿಕಲ್ ಕೋರ್ ಕಂಪನಿಗಳಾದ ಟೊಯೋಟಾ, ಕಿರ್ಲೋಸ್ಕರ್ ಫೆರಸ್, ಹಿಟಾಚಿ, ಮಿಡಲ್ಬೇ ಹಲವಾರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಟೊಯೊಟಾ ಕಿರ್ಲೊಸ್ಕರ್ ಟೆಕ್ಸ್ಟೈಲ್ಸ್ ಮಶಿನರಿ ಪ್ರೈವೆಟ್ ಲಿಮಿಟೆಡ್, ಬಿ.ಎಂ.ಎ0 ಸ್ಟಿಲ್ಸ್, ಹೊಸಪೇಟೆ ಸ್ಟಿಲ್ಸ್ ಇದೇ ಜೂನ್ ಮೊದಲ ವಾರ ಸಂದರ್ಶನ ಪ್ರಕ್ರಿಯೆ ನಡೆಸಲಿವೆ ಎಂದು ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ.ಆರ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಪ್ರಾರಂಭದಿ0ದಲೂ ಕೈಗಾರಿಕಾ ಅವಶ್ಯಕತೆಗಳಿಗೆ ತಕ್ಕಂತೆ ತರಬೇತಿಯನ್ನು ನೀಡುತ್ತಿದ್ದು, ಈ ಫಲಿತಾಂಶ ಬರಲು ಕಾರಣವಾಗಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಂಪನಿಗಳು ಸಂದರ್ಶನವನ್ನು ನಡೆಸಲಿದ್ದು, ಪ್ರತಿಯೊಬ್ಬ ವಿದ್ಯಾರ್ಥಿ ಉದ್ಯೋಗಾವಕಾಶವನ್ನು ಪಡೆಯುವ ನಿರೀಕ್ಷೆಯಿದೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.
ಕಾಲೇಜಿನ ಚೇರ್ಮನ್ ಜಿ.ಎಂ ಲಿಂಗರಾಜು, ಆಡಳಿತ ಮಂಡಳಿಯ ಆಡಳಿತಾಧಿಕಾರಿ ವೈ.ಯು ಸುಭಾಷ್ ಚಂದ್ರ, ವಿವಿಧ ವಿಭಾಗಗಳ ಮುಖ್ಯಸ್ಥರುಗಳು ಆಯ್ಕೆಯಾದ ವಿದ್ಯಾರ್ಥಿಗಳಿಗೆ, ತರಬೇತಿ ಮತ್ತು ಉದ್ಯೋಗ ವಿಭಾಗಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
garudavoice21@gmail.com 9740365719