ಲೋಕಸಭಾ ಚುನಾವಣೆ ದಾವಣಗೆರೆ ಕ್ಷೇತ್ರದಲ್ಲಿ ಶೇ 76.98 ಮತದಾನ, ಮಾಯಕೊಂಡ ಅಸೆಂಬ್ಲಿ ಕ್ಷೇತ್ರದಲ್ಲಿ ಅತೀ ಹೆಚ್ಚು
ದಾವಣಗೆರೆ : 18 ನೇ ಲೋಕಸಭಾ ಚುನಾವಣೆ ನಡೆಯುತ್ತಿದ್ದು ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ನಡೆದ ಮತದಾನದಲ್ಲಿ ಶೇ 76.98 ರಷ್ಟು ಮತದಾನವಾಗಿದ್ದು ಈವರೆಗೂ ನಡೆದ ಚುನಾವಣೆಗಳಲ್ಲಿ ಗರಿಷ್ಠ ಮತದಾನ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ದಾವಣಗೆರೆ ಲೋಕಸಭಾ ಕ್ಷೇತ್ರ ಹರಪನಹಳ್ಳಿ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಕ್ಷೇತ್ರದಲ್ಲಿ ಒಟ್ಟು 1946 ಮತಗಟ್ಟೆಗಳಿಂದ 851990 ಪುರುಷ, 857117 ಮಹಿಳಾ, 137 ಇತರೆ ಸೇರಿ 1709244 ಮತದಾರರಿದ್ದಾರೆ. ಇದರಲ್ಲಿ 667742 ಪುರುಷ, 647964 ಮಹಿಳೆಯರು ಹಾಗೂ 40 ಇತರೆ ಸೇರಿ 1315746 ಮತದಾನವಾಗಿ ಶೇ 76.98 ರಷ್ಟು ಮತದಾನವಾಗಿದೆ.
ಕ್ಷೇತ್ರವಾರು ವಿವರದನ್ವಯ; ಜಗಳೂರು 100046 ಪುರುಷ, 98759 ಮಹಿಳೆ, 10 ಇತರೆ ಸೇರಿ 198815 ಮತದಾರರಲ್ಲಿ 78865 ಪುರುಷ, 74956 ಮಹಿಳೆ, 3 ಇತರೆ ಸೇರಿ 153824 ಮತದಾನ ಮಾಡಿ ಶೇ 77.37, ಹರಪನಹಳ್ಳಿ 112969 ಪುರುಷ, 110985 ಮಹಿಳೆ, 19 ಇತರೆ ಸೇರಿ 223973 ಮತದಾರರಲ್ಲಿ 88443 ಪುರುಷ, 84101 ಮಹಿಳೆ, 3 ಇತರೆ ಸೇರಿ 172547 ಮತದಾನವಾಗಿ ಶೇ 77.04 ರಷ್ಟು ಮತದಾನ ಮಾಡಲಾಗಿದೆ. ಹರಿಹರ 105510 ಪುರುಷ, 106870 ಮಹಿಳೆ, 17 ಇತರೆ ಸೇರಿ 212397 ಮತದಾರರಲ್ಲಿ 85515 ಪುರುಷ, 83116 ಮಹಿಳೆ, 7 ಇತರೆ ಸೇರಿ 168638 ಮತದಾನ ಮಾಡಿ ಶೇ 79.40 ರಷ್ಟು ಮತದಾನವಾಗಿದೆ.
ದಾವಣಗೆರೆ ಉತ್ತರ 124485 ಪುರುಷ, 128635 ಮಹಿಳೆ, 36 ಇತರೆ ಸೇರಿ 253156 ರಲ್ಲಿ 88445 ಪುರುಷ, 89773 ಮಹಿಳಾ, 12 ಇತರೆ ಸೇರಿ 178230 ಮತದಾನವಾಗಿ ಶೇ 70.40 ರಷ್ಟು ಮತದಾನವಾಗಿದೆ. ದಾವಣಗೆರೆ ದಕ್ಷಿಣ 109184 ಪುರುಷ, 111774 ಮಹಿಳಾ, 39 ಇತರೆ ಸೇರಿ 220997 ಮತದಾರರಲ್ಲಿ 77854 ಪುರುಷ, 77105 ಮಹಿಳಾ ಹಾಗೂ 8 ಇತರೆ ಸೇರಿ 154967 ಮತದಾನವಾಗಿ ಶೇ 70.12 ರಷ್ಟು ಮತದಾನವಾಗಿದೆ.
ಮಾಯಕೊಂಡ 97759 ಪುರುಷ, 97326 ಮಹಿಳೆ, 4 ಇತರೆ ಸೇರಿ 195089 ಮತದಾರರಲ್ಲಿ 82568 ಪುರುಷ, 79276 ಮಹಿಳಾ, 2 ಇತರೆ ಸೇರಿ 161846 ಮತದಾನವಾಗಿ ಶೇ 82.96 ರಷ್ಟು ಮತದಾನವಾಗಿದೆ. ಚನ್ನಗಿರಿ 101653 ಪುರುಷ, 102208 ಮಹಿಳೆ, 9 ಇತರೆ ಸೇರಿ 203870 ಮತದಾರರಲ್ಲಿ 82491 ಪುರುಷ, 78670 ಮಹಿಳಾ, 4 ಇತರೆ ಸೇರಿ 161165 ಮತದಾನವಾಗಿ ಶೇ 79.05 ರಷ್ಟು ಮತದಾನವಾಗಿದೆ. ಹೊನ್ನಾಳಿ ಕ್ಷೇತ್ರದಲ್ಲಿ 100384 ಪುರುಷ, 100560 ಮಹಿಳೆ, 3 ಇತರೆ ಸೇರಿ 200947 ಮತದಾರರಲ್ಲಿ 83561 ಪುರುಷ, 80967 ಮಹಿಳಾ, 1 ಇತರೆ ಸೇರಿ 164529 ಮತದಾನವಾಗಿ ಶೇ 81.88 ರಷ್ಟು ಮತದಾನವಾಗಿದೆ.
2019 ರ ಚುನಾವಣೆಯಲಿ ಶೇ 72.96 ರಷ್ಟು ಮತದಾನವಾಗಿತ್ತು.
ಮತ ಎಣಿಕೆ ಜೂನ್ 4; ಲೋಕಸಭಾ ಚುನಾವಣಾ ಮತದಾನ ಎಣಿಕೆಯು ಜೂನ್ 4 ರಂದು ಬೆಳಗ್ಗೆ 8 ರಿಂದ ತೋಳಹುಣಸೆಯಲ್ಲಿನ ದಾವಣಗೆರೆ ವಿಶ್ವವಿದ್ಯಾನಿಲಯ ಶಿವಗಂಗೋತ್ರಿಯಲ್ಲಿ ನಡೆಯಲಿದ್ದು ಅಲ್ಲಿಯವರೆಗೆ ಲೋಕಸಭಾ ಕ್ಷೇತ್ರದ 30 ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂನಲ್ಲಿ ಕೇಂದ್ರ ಹಾಗೂ ರಾಜ್ಯ ಸಶಸ್ತ್ರ ಮೀಸಲು ಪಡೆ ಭದ್ರತೆಯೊಂದಿಗೆ ಭದ್ರವಾಗಿರಲಿದೆ.