ಔರಾದ್ಕರ್ ವರದಿ ಬಗ್ಗೆ ಬೆಳಗಾವಿ ವಿಧಾನ ಸಭೆ ಅಧಿವೇಶನದಲ್ಲಿ ಚರ್ಚೆ- ಅಧಿವೇಶನ ಬಳಿಕ ಸರ್ಕಾರ ಔರಾದ್ಕರ್ ವರದಿ ನ್ಯಾಯಯುತವಾಗಿ ಜಾರಿ ಮಾಡುತ್ತಾ..?

ಬೆಂಗಳೂರು : ಔರಾದ್ಕರ್ ವರದಿ ಕುರಿತು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶದಲ್ಲಿ ಚರ್ಚೆ ನಡೆಸುವ ಬಗ್ಗೆ ಚುಕ್ಕೆ ಪ್ರಶ್ನೆ ಇದ್ದು,ಚರ್ಚೆಗೆ ಬರಲಿದೆ. ಎಂಎಲ್ ಸಿ ಅನಿಲ್ ಚಿಕ್ಕಮಾದು ಚರ್ಚಿಸಲಿದ್ದಾರೆ. ಪೊಲೀಸರಿಗೆ ಕುಂದು ಕೊರತೆ ಆಲಿಸಲು ನೇಮಿಸಿದ್ದ ಔರಾದ್ಕರ್ ವರದಿಯಿಂದ ಕೇವಲ 5000 ಸಾವಿರ ಮಂದಿ ಪೊಲೀಸ್ ಸಿಬ್ಬಂದಿಗೆ ಅನುಕೂಲವಾಗಿದೆ..ಉಳಿದ 85000 ಸಾವಿರ ಮಂದಿಗೆ ಸರ್ಕಾರ ಅನುಕೂಲ ಮಾಡಿಕೊಡಬೇಕಿದೆ..ಈ ಬಗ್ಗೆ ವಿಧಾನ ಪರಿಷತ್ ನಲ್ಲಿ ಚರ್ಚೆ ನಡೆಯಲಿದೆ..ರಾಜ್ಯ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿಯಾದರೂ ಪೊಲೀಸರ ಬಹು ದಿನಗಳ ಬೇಡಿಕೆ ಈಡೇರಿಸುತ್ತಾ ಎಂಬುದು ಕುತೂಹಲ ಮೂಡಿಸಿದೆ.