Miss Universe 2021 Harnaaz Sandhu: ಭಾರತದ ಹರ್ನಾಝ್ ಕೌರ್ ಸಂಧು 2021 ಸಾಲಿನ ವಿಶ್ವ ಸುಂದರಿ ಪಟ್ಟ

miss universe 2021 harnaaz kour sandhu

ಇಸ್ರೇಲ್: ಭಾರತದ ಹರ್ನಾಝ್​ ಸಂಧು 2021ರ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 2000 ನೇ ಇಸವಿಯಲ್ಲಿ ಭಾರತದ ಲಾರಾ ದತ್ತಾ ಈ ಮೊದಲು ಪ್ರಶಸ್ತಿಯನ್ನು ಗೆದ್ದಿದ್ದರು. ಇದೀಗ 21 ವರ್ಷಗಳ ನಂತರ ಭಾರತದ ರೂಪದರ್ಶಿಗೆ ವಿಶ್ವ ಸುಂದರಿ ಪಟ್ಟ ಒಲಿದು ಬಂದಿದೆ. ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ 70ನೇ ವಿಶ್ವ ಸುಂದರಿ 2021 ರಲ್ಲಿ ಸಂಧು ಭಾರತವನ್ನು ಪ್ರತಿನಿಧಿಸಿದ್ದರು.

 

21 ವರ್ಷದ ಹರ್ನಾಝ್​ ಸಂಧು ಪಂಜಾಬ್‌ ಮೂಲದವರಾಗಿದ್ದು, ಪೆರುಗ್ವೆಯಯ ಫೆರೇರಾ ಮತ್ತು ದಕ್ಷಿಣ ಆಫ್ರಿಕಾದ ಲಲೆಲಾ ಮಸ್ವಾನೆ ಅವರನ್ನು ಹಿಂದಿಕ್ಕಿ ಭುವನ ಸುಂದರಿ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹರ್ನಾಝ್​ ಕೌರ್ ಸಂಧು ಅವರಿಗೆ ಮೆಕ್ಸಿಕೋದ ಮಾಜಿ ವಿಶ್ವ ಸುಂದರಿ ಆಂಡ್ರಿಯಾ ಮೆಜಾ ಅವರು ಕಿರೀಟವನ್ನು ತೊಡಿಸಿದರು.

ಹರ್ನಾಜ್ ಸಂಧು ಭಾರತಕ್ಕೆ ಹೆಮ್ಮೆ ತಂದರು ಮತ್ತು ಮಿಸ್ ಯೂನಿವರ್ಸ್ 2021 ಕಿರೀಟವನ್ನು ಮನೆಗೆ ತಂದರು. 21 ವರ್ಷದ ರೂಪದರ್ಶಿ ಮತ್ತು ನಟಿ 80 ದೇಶಗಳ ಸ್ಪರ್ಧಿಗಳನ್ನು ಸೋಲಿಸಿ ಅಸ್ಕರ್ ಪ್ರಶಸ್ತಿಯನ್ನು ಗೆದ್ದರು. ಈ ಗೆಲುವಿನೊಂದಿಗೆ, 1994 ರಲ್ಲಿ ಸುಶ್ಮಿತಾ ಸೇನ್ ಮತ್ತು 2000 ರಲ್ಲಿ ಲಾರಾ ದತ್ತಾ ಕಿರೀಟವನ್ನು ಗೆದ್ದ ನಂತರ ಹರ್ನಾಜ್ ಈಗ ಪ್ರಶಸ್ತಿಯನ್ನು ಗೆದ್ದ ಮೂರನೇ ಭಾರತೀಯರಾಗಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!