ಜಿಲ್ಲಾ ಬಿಜೆಪಿಯಿಂದ ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮ, ಶಿವನ ದೇಗುಲಗಳಲ್ಲಿ ವಿಶೇಷ ಪೂಜೆ

ದಾವಣಗೆರೆ: ಶ್ರೀ ಕಾಶಿ ವಿಶ್ವನಾಥ ದೇಗುಲದ ಧಾರ್ಮಿಕ ನಗರವನ್ನು ದಿವ್ಯ ಕಾಶಿ-ಭವ್ಯ ಕಾಶಿ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿಯಿಂದ ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮ, ಶಿವನ ದೇಗುಲಗಳಲ್ಲಿ ವಿಶೇಷಪೂಜೆ ಸಲ್ಲಿಸಲಾಯಿತು.
ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಮಾಯಕೊಂಡ, ಚೆನ್ನಗಿರಿ, ಜಗಳೂರು, ಹೊನ್ನಾಳಿ, ಹರಿಹರ ನಗರ ಮತ್ತು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಶಿವನ ಮಂದಿರಗಳಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಎಸ್. ಜಗದೀಶ್ ಇದೇ ವೇಳೆ ಮಾತನಾಡಿ, ನಮ್ಮ ನೆಚ್ಚಿನ ಪ್ರಧಾನಿಗಳು ದೇಶದ ಅಭಿವೃದ್ಧಿ, ದೇಶದ ರಕ್ಷಣೆ, ಜೊತೆಗೆ ಧಾರ್ಮಿಕ ಅಭಿವೃದ್ದಿಯನ್ನು ಕೈಗೊಂಡಿದ್ದಾರೆ. ಕಾಶಿ ವಿಶ್ವನಾಥ ದೇವಸ್ಥಾನದ ಸಂಪೂರ್ಣ ಅಭಿವೃದ್ಧಿಗಾಗಿ ಸುಸಜ್ಜಿತವಾದ ರಸ್ತೆಗಳನ್ನು ನಿರ್ಮಿಸಿದ್ದು, ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಯಾತ್ರಿಗಳ ನಿವಾಸಗಳನ್ನು ಒಳಗೊಂಡಂತೆ ಎಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ. ಕಾಶಿಯನ್ನು ಸಂಪೂರ್ಣ ಅಭಿವೃಧ್ಧಿಗೊಳಿಸಿದ ಪ್ರಧಾನಿಗಳು ಕಲುಷಿತಗೊಂಡಿದ್ದ ಗಂಗಾನದಿಯನ್ನು ಆದುನಿಕ ತಂತ್ರಜ್ಞಾನದಿAದ ಗಂಗಾನದಿಯನ್ನು ಸಂಪೂರ್ಣ ಸ್ವಚ್ಛಮಯ ಮಾಡಲಾಗಿದೆ. ಹಿಂದೂಗಳ ಪವಿತ್ರ ಸ್ಥಳವಾದ ಕಾಶಿಗೆ ಜೀವನದಲ್ಲಿ ಒಮ್ಮೆಯಾದರು ಭೇಟಿನೀಡದರೆ ನಮ್ಮ ಪಾಪಗಳೆಲ್ಲ ಪರಿವಾರವಾಗಿ ದೇವರು ಮೋಕ್ಷ ನೀಡುತ್ತಾನೆ ಎಂಬ ನಂಬಿಕೆ ಇದೆ. ಆದ್ದರಿಂದ ಎಲ್ಲಾ ಹಿಂದುಗಳು ಒಮ್ಮೆಯಾದರು ಭೇಟಿನೀಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎಸ್. ಎಂ. ವೀರೇಶ್ ಹನಗವಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಸ್. ಜಗದೀಶ್, ಸೊಕ್ಕೆ ನಾಗರಾಜ್, ಶಾಂತರಾಜ್ ಪಾಟೀಲ್, ಮಹಾ ಪೌರರಾದ ಎಸ್. ಟಿ. ವೀರೇಶ್, ದೂಡ ಅಧ್ಯಕ್ಷ ದೇವರಮನೆ ಶಿವುಕುಮಾರ್, ಜಿಲ್ಲಾ ಉಪಾಧ್ಯಕ್ಷ ಶಿವರಾಜ್ ಪಾಟೀಲ್, ಮಂಜನಾಯ್ಕ್ ಶ್ರೀನಿವಾಸ್ ದಾಸಕರಿಯಪ್ಪ, ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ದೂಡ ಅಧ್ಯಕ್ಷ ರಾಜನಹಳ್ಳಿ ಶಿವುಕುಮಾರ್, ಜಿಲ್ಲಾ ಮಾಧ್ಯಮ ಪ್ರಮುಖ್ ವಿಶ್ವಾಸ್ ಹೆಚ್. ಪಿ., ಜಿಲ್ಲಾ ಕಾರ್ಯದರ್ಶಿ ಗೋಪಾಲ್ ರಾವ್ ಮಾನೆ, ಮಂಡಲ ಅಧ್ಯಕ್ಷ ಸಂಗನಗೌಡ್ರು, ಆನಂದರಾವ್ ಶಿಂಧೆ, ಮಹೇಶ್, ದೇವೇಂದ್ರಪ್ಪ ಶ್ಯಾಗಲೆ, ಶ್ರೀ ಅಜಿತ್ ಸಾವಂತ್, ಶ್ರೀಲಿಂಗರಾಜು, ಹಾಗೂ ಶ್ರೀ ಜಿ. ಕೆ. ಸುರೇಶ್, ಮಂಡಲದ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಗೀತಾ ದಿಳ್ಯಪ್ಪ, ಸೋಗಿ ಶಾಂತ, ಶ್ರೀ ರಾಜು ಶಾಮನೂರು, ಶ್ರೀ ಹೇಮಂತ್ ಕುಮಾರ್, ಶ್ರೀನಿವಾಸ್, ಗುರುಸೋಗಿ, ಸರ್ವಮಂಗಳಮ್ಮ, ಮಂಜುಳಮಹೇಶ್, ಭಾಗ್ಯ ಪಿಸಾಳೆ, ಸವಿತಾನಾಯ್ಕ, ರವಿನಾಯ್ಕ್ ಶಶಿಕಲಾ, ಶಾಂತದೊರೆ, ಶಿವಕುಮಾರ್ ಸೇರಿದಂತೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು.