ಧರ್ಮಸ್ಥಳದ ಪ್ರಸಾದ ನಿಲಯದಲ್ಲಿ ಚಾಲಕನಿಗೆ ಸಿಕ್ತು ಹಣವಿದ್ದ ಪರ್ಸ್.! ವಾರಸುದಾರನಿಗೆ ತಲುಪಿಸಿದ ಕಥೆ ರೋಮಾಂಚಕ.! ಓದಿ ಶೇರ್ ಮಾಡಿ

ದಾವಣಗೆರೆ: ರಸ್ತೆಯ ಮೇಲೆ ಬಿದ್ದ 1 ರು., ಅನ್ನು ಸಹ ಬಿಡದೆ ಜೇಬಿಗಿಳಿಸುವ ಮಂದಿಯೇ ಹೆಚ್ಚು. ಅದರಲ್ಲೂ ಹಣ ಇರುವ ಪರ್ಸ್ ನ್ನು ಬಿಡುತ್ತಾರೆಯೇ? ಆದರಿಲ್ಲಿ ಪ್ರಾಮಾಣಿಕ ಆಟೋ ಚಾಲಕನೋರ್ವ ತನಗೆ ಸಿಕ್ಕಿರುವ ಪರ್ಸನ್ನು ಸಂಬಂಧಿಸಿದ ವ್ಯಕ್ತಿಗೆ ತಲುಪಿಸಿ ಸನ್ಮಾನ ಪಡೆದುಕೊಂಡಿದ್ದಾನೆ.
ಹೌದು, ಪ್ರಾಮಾಣಿಕತೆ ತೋರಿದ ದಾವಣಗೆರೆ ಭಾರತ್ ಕಾಲೋನಿ ನಿವಾಸಿ ಚಾಲಕ ಮಂಜುನಾಥ್ ಅವರಿಗೆ ಬಡಾವಣೆ ಠಾಣೆಯ ಪಿಎಸ್ಐ ಅವರು ಶಾಲು ಹೊದಿಸಿ ಸನ್ಮಾನಿಸಿ, ಚಾಲಕನ ಪ್ರಾಮಾಣಿಕತೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳದಲ್ಲಿ ಊಟ ಮಾಡುವ ಹಾಲ್ ನಲ್ಲಿ ಚಾಲಕನಿಗೆ ಪರ್ಸ್ ಸಿಕ್ಕಿದೆ. ಆದರೆ, ಬಹಳ ಹೊತ್ತು ಅದೇ ಸ್ಥಳದಲ್ಲಿ ಕಾದು ನೋಡಿದರೂ ಸಂಬಂಧಿಸದ ವ್ಯಕ್ತಿ ಅತ್ತಕಡೆ ಸುಳಿದಾಡಿಲ್ಲ. ಟ್ಯಾಕ್ಸಿ ಚಾಲಕ ಆಗಿರುವ ಕಾರಣ ಇವರಿಗೂ ಸಮಯದ ಅಭಾವದಿಂದ ದಾವಣಗೆರೆಗೆ ವಾಪಾಸ್ದಾಗಿದ್ದಾರೆ.
ನಂತರ ಪರ್ಸ್ ಹೇಗೆ ಸಂಬಂಧಪಟ್ಟ ವ್ಯಕ್ತಿಗೆ ತಲುಪಿಸಬೇಕೆಂದು ತಿಳಿಯದೆ ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಅವರಿಗೆ
ಇಂದು ಕರೆ ಮಾಡಿ ಅವರ ಕೈಗೆ ಕೊಟ್ಟು ಇದನ್ನು ಸಂಬಂಧಿಸಿದವರಿಗೆ ತಲುಪಿಸಿ ಎಂದು ಕೇಳಿಕೊಂಡಿದ್ದಾರೆ.
ನಂತರ ಶ್ರೀಕಾಂತ್ ಅವರು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಬಿಟ್ ವ್ಯವಸ್ಥೆ,ನಂತರ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಠಾಣೆಗೆ ಕರೆ ಮಾಡಿ ನಿಮ್ಮ ಠಾಣೆ ವ್ಯಾಪ್ತಿಯಲ್ಲಿ ಗುರು ಪ್ರಸಾದ್ ಎಂಬ ಹೆಸರಿರುವ ವ್ಯಕ್ತಿ ಯೊಬ್ಬರು ತಮ್ಮ ಪರ್ಸ ಕಳೆದುಕೊಂಡಿದ್ದಾರೆ ಎಂದು ನಡೆದ ಘಟನೆಯ ಮಾಹಿತಿಯನ್ನು ಹೇಳಿದ್ದಾರೆ. ಅಲ್ಲಿನ ಸಿಬ್ಬಂದಿ ಯವರ ವಾಟ್ಸಾಪ್ ಗೆ ಡಿ ಎಲ್ ಪ್ರತಿಯನ್ನು ಕಳುಹಿಸಿದ್ದಾರೆ. ಸಂಜೆ ೪ ಗಂಟೆಗೆ ಕರೆ ಬಂದಿದ್ದು,ತಾವು ಗುರುಪ್ರಸಾದ್ ಎಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಇರುವುದಾಗಿ ಪರ್ಸ್ ಕಳೆದುಕೊಂಡಿದ್ದ ವ್ಯಕ್ತಿ ತಿಳಿಸಿದ್ದಾರೆ. ನಂತರ ಪರ್ಸ್ ನಲ್ಲಿದ್ದ ಅಷ್ಟು ಹಣ, ದಾಖಲೆ ಪತ್ರಗಳು ಸರಿಯಾಗಿರುವುದಾಗಿ ತಿಳಿಸಿ ಇಬ್ಬರಿಗೂ ಧನ್ಯವಾದವನ್ನೂ ತಿಳಿಸಿದ್ದಾರೆ.
ಒಟ್ಟಿನಲ್ಲಿ ಸಾಮಾಜಿಕ ಕಳಕಳಿ ಇರುವ ವ್ಯಕ್ತಿಗಳ ಕೈಗೆ ಪರ್ಸ್ ಸಿಕ್ಕಿರುವ ಕಾರಣ ಅದು ವಾರಸುದಾರರಿಗೆ ತಲುಪಲು ನೆರವಾಗಿದೆ.