ಓಲಾ, ಉಬರ್ ಇ–ವಾಣಿಜ್ಯ ವೇದಿಕೆಯ ಆಟೊ ರಿಕ್ಷಾ ಸೇವೆಗಳಿಗೆ ಜನವರಿ 1 ರಿಂದ ಶೇ. 5ರಷ್ಟು ಜಿಎಸ್‌ಟಿ ಅನ್ವಯ

ಬೆಂಗಳೂರು: ಓಲಾ, ಉಬರ್ ಸೇರಿದಂತೆ ಇ–ವಾಣಿಜ್ಯ ವೇದಿಕೆಗಳ ಮೂಲಕ ನೀಡುವ ಆಟೊ ರಿಕ್ಷಾ ಸೇವೆಗಳಿಗೆ ಬರುವ ಜನವರಿ 1 ರಿಂದ ಶೇ. 5ರಷ್ಟು ಜಿಎಸ್‌ಟಿ ಅನ್ವಯ ಆಗಲಿದೆ ಎಂಬುದಾಗಿ ಕೇಂದ್ರ ಹಣಕಾಸು ಸಚಿವಾಲಯದ ಅಧೀನದ ರೆವೆನ್ಯು ಇಲಾಖೆ ಹೊರಡಿಸಿರುವ ಅಧಿಸೂಚನೆ ಹೊರಡಿಸಿದೆ.
ಇ–ವಾಣಿಜ್ಯ ವೇದಿಕೆಗಳ ಮೂಲಕ ಆಟೊ ರಿಕ್ಷಾ ಸೇವೆ ಒದಗಿಸುವುದಕ್ಕೆ ಇದ್ದ ಜಿಎಸ್‌ಟಿ ವಿನಾಯಿತಿಯನ್ನು ಹಿಂದಕ್ಕೆ ಪಡೆಯುವ ವಿಚಾರವನ್ನು ಹೇಳಲಾಗಿದೆ. ಆಟೊ ಚಾಲಕರು ಆಫ್‌ಲೈನ್ ಮೂಲಕ ನೀಡುವ ಸೇವೆಗಳಿಗೆ ಜಿಎಸ್‌ಟಿ ವಿನಾಯಿತಿಯು ಮುಂದುವರಿಯಲಿದೆ ಎಂದು ತಿಳಿಸಿದೆ.