ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಪತ್ರ ವಿತರಣೆಗೆ ಅರ್ಜಿ ಆಹ್ವಾನ

ದಾವಣಗೆರೆ: ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ಕೇಂದ್ರ ಪುರಷ್ಕೃತ ಡೇ-ನಲ್ಮ್ ಯೋಜನೆಯಡಿ ಬೀದಿ ವ್ಯಾಪಾರಿಗಳಿಗೆ ಗುರುತಿನ ಪತ್ರ ವಿತರಿಸುವ ಸಂಬಂಧ ಅರ್ಹ ಪಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು ಪ್ರಸಕ್ತ ಸಾಲಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ಆಧಾರ ಕಾರ್ಡ್, ಮತದಾರರ ಗುರುತಿನ ಪತ್ರ, ಪಡಿತರ ಚೀಟಿ, ಎರಡು ಭಾವಚಿತ್ರ, ವ್ಯಾಪಾರದ ಭಾವಚಿತ್ರ, ಮತ್ತು ಬ್ಯಾಂಕ್‌ನ ಪಾಸ್ ಪುಸ್ತಕ ಈ ಅಧಿಕೃತ ದಾಖಲೆಗಳೊಂದಿಗೆ ಡಿ.೨೪ ರೊಳಗೆ ಪೌರಾಯುಕ್ತರು, ನಗರಸಭೆ, ಹರಿಹರ ಇಲ್ಲಿಗೆ ಸಲ್ಲಿಸಬೇಕೆಂದು ತಿಳಿಸಿದೆ.