ಎಚ್ ಡಿ ಕೆ ಹುಟ್ಟುಹಬ್ಬ ಹಿನ್ನೆಲೆ, ಹಾವೇರಿಯಲ್ಲಿ ವೈದ್ಯರು, ಪೊಲೀಸ್ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

HDK 1

ಹಾವೇರಿ: ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿಯವರ ೬೩ನೇ ಹುಟ್ಟು ಹಬ್ಬವನ್ನು ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಡಾ. ಮಲ್ಲಿಕಾರ್ಜುನಯ್ಯ,ಡಾ.ಮಹಾದೇವ ಬಣಕಾರ,ಆಶಾ ಕಾರ್ಯಕರ್ತರಾದ ಶ್ರೀಮತಿ ಸುನಂದ ಕೆ. ಚನ್ನಗೌಡ್ರ,ಪೋಲಿಸ್ ಸಿಬ್ಬಂದಿ ಜಿ.ಎಂ. ಶೇಖಸನದಿ.

ಆಸ್ಪತ್ರೆಯ ಸಿಬ್ಬಂದಿಗಳಾದ ಶಮೀನಾಬಾನು, ಸುಶೀಲಾ ದೇವಸೂರ, ರವಿ ಕೊಂಡಿ ಸೇರಿದಂತೆ ಕೋವಿಡ್ ೨ನೇ ಅಲೆಯ ಸಂದರ್ಭದಲ್ಲಿ ಹಗಲಿರುಳು ಶ್ರಮಿಸಿದ ವೈದ್ಯರು, ಪೊಲೀಸ್ ಇಲಾಖೆ, ಆಶಾಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.

ನಂತರ ರೋಗಿಗಳಿಗೆ ಹಣ್ಣು ಹಂಪಲಗಳನ್ನು ಹಂಚುವ ಮೂಲಕ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಕೆ.ಎಂ. ಸುಂಕದ ಮಾತನಾಡಿ ೨೦೨೩ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಜನತೆಯ ಆಶಿರ್ವಾದದಿಂದ ಅಧಿಕಾರ ಬಂದಲ್ಲಿ ಕೃಷಿ ಭೂಮಿಹೊಂದಿದ ರೈತರಿಗೆ ಉಚಿತವಾಗಿ ರಸಗೊಬ್ಬರ, ಬೀಜ ವಿತರಿಸುವ ಮಹತ್ವದ ಯೋಜನೆಯೊಂದಿಗೆ ಹಾಗೂ ಪಂಚರತ್ನ ಯೋಜನೆಗಳಾದ ಆರೋಗ್ಯ, ಶಿಕ್ಷಣ, ಕೃಷಿ, ವಸತಿ, ಉದ್ಯೋಗ ಕ್ಷೇತ್ರದಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಿ ಜಾರಿಗೆ ತರುವುದು ಮೂಲ ಉದ್ದೇಶವಾಗಿದೆ.

ಕರ್ನಾಟಕವನ್ನು ದೇಶದಲ್ಲಿಯೇ ಮಾದರಿ ರಾಜ್ಯವನ್ನಾಗಿ ಮಾಡಲಾಗುವುದು. ಅಧಿಕಾರ ನಮಗಾಗಿ ಅಲ್ಲ ನಾಡಿನ ಜನರ ಬದುಕು ಕಟ್ಟಿಕೊಡಲು ಬೇಕಾಗಿದೆ.ಈ ಬಾರಿ ಜೆ.ಡಿ.ಎಸ್ ಪಕ್ಷವನ್ನು ಜನತೆ ಆಶೀರ್ವದಿಸಬೇಕಾಗಿದೆ. ಕುಮಾರಸ್ವಾಮಿ ಅವರ ಹುಟ್ಟು ಹಬ್ಬವನ್ನು ವಿಶೇಷವಾಗಿ ಮಹತ್ವಪೂರ್ಣವಾಗಿ ಆಚರಸಿದೆ ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎಸ್.ಎಸ್.ಕಳ್ಳಿಮನಿ, ಶಿವಕುಮಾರ ಮಠದ, ಮಾಂತೇಶ ಬೇವಿನಹಿಂಡಿ. ಫಕ್ಕೀರಗೌಡ ಗಾಜೀಗೌಡ್ರ ಅಮೀರಜಾನ ಬೇಪಾರಿ, ಸುನೀಲ ದಂಡೆಮ್ಮನವರ. ಸೈಯದ ಜಮಾದರ, ಸುರೇಂದ್ರ ಮೋಟೆಬೆನ್ನೂರ,ರವಿ ಗಂಗಮ್ಮನವರ, ಎಚ್. ನದಾಫ್, ಬಿ.ಮಂತಗಿ, ಸಂಗಪ್ಪ ಪರಿಶೆಟ್ಟಿ, ತೌಸೀಫ ಅಹ್ಮದ ಬ್ಯಾಡಗಿ, ಎಚ್.ಹುಬ್ಬಳ್ಳಿ ಮತ್ತು ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!