ಆತ್ಮರಕ್ಷಣೆಗಾಗಿ ಪ್ರಾಥಮಿಕ ಹಂತದಲ್ಲಿಯೇ ಪ್ರಸ್ತುತ ದಿನಗಳಲ್ಲಿ ಕರಾಟೆ ಅನಿವಾರ್ಯವಾಗಿದೆ – ವೀರಪ್ಪ ಎಂ ಭಾವಿ
ದಾವಣಗೆರೆ: ದಾವಣಗೆರೆಯಲ್ಲಿ ಜನವರಿ 1ರಂದು ಆತ್ಮರಕ್ಷಣೆಗಾಗಿ ಪ್ರಸ್ತುತ ದಿನಗಳಲ್ಲಿ ಕರಾಟೆ ಅನಿವಾರ್ಯವಾಗಿದೆ ಶಾಲಾ ಮಕ್ಕಳಲ್ಲಿ ಅಂದರೆ ಪ್ರಾಥಮಿಕ ಹಂತದಲ್ಲಿಯೇ ತರಬೇತಿ ನೀಡುವುದು ಅವಶ್ಯಕವೆಂದು ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ ಭಾವಿ ಇವರು ಅಭಿಪ್ರಾಯಪಟ್ಟರು.
ಅವರು ಇಂದು ದಾವಣಗೆರೆ ಲಯನ್ಸ್ ಕ್ಲಬ್ ಭವನದಲ್ಲಿ ಏರ್ಪಡಿಸಿದ್ದ ಬಾಲಕ-ಬಾಲಕಿಯರಿಗೆ ಕರಾಟೆ ತರಬೇತಿ ಶಿಬಿರದ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಓರ್ವ ಮಹಿಳೆ ರಾತ್ರಿ 12 ಗಂಟೆಯ ನಂತರ ಓಡಾಡಿಕೊಂಡು ಸುರಕ್ಷಿತವಾಗಿ ಮನೆಗೆ ಬಂದರೆ ಅಂದಿಗೆ ಸ್ವಾತಂತ್ರ್ಯ ಸಿಕ್ಕಿದ್ದು ಸಾರ್ಥಕವಾಗುತ್ತದೆ ಎಂದು ಮಹಾತ್ಮ ಗಾಂಧಿ ಹೇಳಿದ್ದನ್ನು ಸ್ಮರಿಸಿಕೊಂಡ ಭಾವಿ ಯವರು , ಇಂದು ಏನಾಗಿದೆ ರಾತ್ರಿ ಮನೆಬಿಟ್ಟು ಹೋದ ಮಹಿಳೆ ವಾಪಾಸು ಬರುತ್ತಾಳೋ ಇಲ್ಲವೋ ಎಂಬುದು ಗ್ಯಾರಂಟಿ ಇಲ್ಲದಂತಾಗಿದೆ ಅಂದಾಗ ಸ್ವಾತಂತ್ರ್ಯ ಸಿಕ್ಕಿದ್ದಕ್ಕೆ ಏನು ಬೆಲೆ ಬಂದಂತಾಗಿದೆ ಎಂದು ಪ್ರಶ್ನಸಿ , ಈ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಕ್ರೀಡಾ ಚಟುವಟಿಕೆಗಳ ಜೊತೆಗೆ ಆತ್ಮರಕ್ಷಣೆಗಾಗಿ ಕರಾಟೆ ಕಲಿಸುವುದನ್ನು ಹೇಳಿ ಕೊಡಬೇಕೆಂದು ಕರೆ ನೀಡಿದರು.
ಸೇವೆ ಮತ್ತು ತ್ಯಾಗಕ್ಕೆ ಹೆಸರಾದ ಲಯನ್ಸ್ ಕ್ಲಬ್ ಗಳಲ್ಲಿ ಇತ್ತೀಚೆಗೆ ಜಾತೀಯತೆಯ ಸೋಂಕಿನಲ್ಲಿ ಸಿಕ್ಕ ಸೇವಾಮನೋಭಾವದ ಕೊರತೆ ಎದ್ದು ಕಾಣುತ್ತದೆ ಎಂದರು. ನಗರದಲ್ಲಿ ಈ ಹಿಂದೆ ಲಯನ್ಸ್ ಕ್ಲಬ್ ಗಳ ಬಸ್ಸು ತಂಗುದಾಣಗಳನ್ನು ನೋಡುತ್ತದ್ದೇವು ಆದರೆ ಹೆಸರು ಹೇಳಲಿಕ್ಕು ಒಂದೂ ಇಲ್ಲವೆಂದರು. ಲಯನ್ಸ್ ಕ್ಲಬ್ ಗಳ ಸೇವೆ ನಿರಂತರವಾಗಿ ನಡೆಯುತ್ತಲೇ ಬರುತ್ತಿವೆ ಅವುಗಳಿಗೆ ಪ್ರಚಾರದ ಕೊರತೆ ಎದ್ದು ಕಾಣುತ್ತದೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ ಶಟ್ಟಿಯವರು ನುಡಿದರು. ತರಭೇತುದಾರ ಕಿಪಿ ಜೋಸ್, ಕೆಟಿ ಮಹಾಲಿಂಗೇಶ್, ಎಸ್ ಜೆ ಮಲ್ಲಿಕಾರ್ಜುನ್, ಸಂತೋಷ ವೇದಿಕೆ ಮೇಲೆ ಉಪಸ್ಥಿತರಿದ್ದರು. ಆರಂಭದಲ್ಲಿ ಪ್ರಾರ್ಥನೆ, ನಂತರ ಅಧ್ಯಕ್ಷತೆ ವಹೊಸಿದ್ದ ಲಯನ್ಸ್ ಕ್ಲಬ್ ಅದ್ಯಕ್ಷ ಓಂಕಾರಪ್ಪ ಅದ್ಯಕ್ಷತೆ ವಹಿಸಿ ಸ್ವಾಗತಿಸಿದರು. ಅಂತ್ಯದಲ್ಲಿ ನಟರಾಜ್ ವಂದಿಸಿದರು. ಕೋರಿ ಶಿವಕುಮಾರ್ ಕಾರ್ಯಕ್ರಮ ನಿರೂಪಿಸೊದರು.