Breaking: ದಾವಣಗೆರೆ ಜಿಲ್ಲೆಯಲ್ಲಿ ಜೂನ್ 7ರವರೆಗೆ ಲಾಕ್‌ಡೌನ್ ಮುಂದುವರಿಕೆ – ಮಹಾಂತೇಶ್ ಭೀಳಗಿ

Big breaking
ದಾವಣಗೆರೆ: ಜೂನ್ 7ರವರೆಗೆ ಲಾಕ್‌ಡೌನ್ ಮುಂದುವರಿಕೆ ಈಗಾಗಲೇ 24ರಿಂದ 31ರ ಬೆಳಗ್ಗೆ 6ರವರೆಗೆ ಕಂಪ್ಲೀಟ್ ಲಾಕ್‌ಡೌನ್ ಜಾರಿಯಲ್ಲಿದೆ. ಇಂದು ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಮೇ. 31ರ ಮಧ್ಯಾಹ್ನ 12 ರಿಂದ ಜೂನ್ 7ರವರೆಗೆ ಕಂಪ್ಲೀಟ್ ಲಾಕ್‌ಡೌನ್‌ಗೆ ತೀರ್ಮಾನ ಮಾಡಲಾಗಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಭೀಳಗಿ ತಿಳಿಸಿದ್ದಾರೆ.
ಮೇ 31 ಹಾಗೂ ಜೂನ್ 3 ರಂದು ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ.
ಈ ಅವಧಿಯಲ್ಲಿ ಪಡಿತರ, ಮಾಂಸ, ಮದ್ಯ ಅಂಗಡಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ.
ಮೊದಲೇ ಪರವಾನಗಿ ಪಡೆದ ಮದುವೆಗಳಿಗೆ ಗರಿಷ್ಟ 10 ಜನಕ್ಕೆ ಅವಕಾಶವಿದೆ ಎಂದು ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದ್ದಾರೆ.