ಬಜೆಟ್ ದೇಶದ ಅರ್ಥ ವ್ಯವಸ್ಥೆಯ ವಸ್ತು ಸ್ಥಿತಿಯ ವಲಯವಾರು ಮಾಹಿತಿ ಒಳಗೊಂಡ ದಾಖಲೆ – ಡಾ.ಮಂಜುನಾಥ್

ದಾವಣಗೆರೆ: ಕೇಂದ್ರ ಹಣಕಾಸು ಸಚಿವಾಲಯವು ಪ್ರತಿ ವರ್ಷ ಬಜೆಟ್ ಮಂಡಿಸುವ ಮೊದಲು ಕಳೆದ ಒಂದು ವರ್ಷದ ದೇಶದ ಅರ್ಥ ವ್ಯವಸ್ಥೆಯ ವಸ್ತು ಸ್ಥಿತಿಯನ್ನು ವಲಯವಾರು ವಿವರಣಾತ್ಮಕ ಮಾಹಿತಿಯನ್ನು ಒಳಗೊಂಡ ದಾಖಲೆಯಾಗಿದೆ ಎಂದು ವಾಣಿಜ್ಯ ಶಾಸ್ತ್ರ ವಿಭಾಗದ ಡಾ ಮಂಜುನಾಥ್ ಹೇಳಿದರು .
ಅವರೆಂದೂ ವಾಣಿಜ್ಯ ಶಾಸ್ತ್ರ ವಿಭಾಗದ ವತಿಯಿಂದ ಲೈವ್ ಬಡ್ಜೆಟ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಜೆಟ್ ಗೂ ಆರ್ಥಿಕ ಸಮೀಕ್ಷೆಗೆ ಇರುವ ವ್ಯತ್ಯಾಸ ಏನೆಂದರೆ
ಬಜೆಟ್ ಭವಿಷ್ಯದ ಆದಾಯ ವೆಚ್ಚಗಳಿಗೆ ಸಂಬಂಧಿಸಿದ್ದು , ಮುಂದಿನ ಒಂದು ವರ್ಷದ ಆರ್ಥಿಕ ಚಟುವಟಿಕೆಗಳ ಅಂದಾಜನ್ನು ಒಳಗೊಂಡಿರುತ್ತದೆ.
ಆರ್ಥಿಕ ಸಮೀಕ್ಷೆ ಒಂದು ವರ್ಷದಲ್ಧಿ ಈಗಾಗಲೇ ಸಾಧಿಸಿರುವ ಆರ್ಥಿಕ ಚಟುವಟಿಕೆಗಳ ವಸ್ತು ಸ್ಥಿತಿಯ ಬಗ್ಗೆ ಮಾಹಿತಿ ಒಳಗೊಂಡಿರುತ್ತದೆ ಎಂದು ತಿಳಿಸಿದರು ಆರ್ಥಿಕ ಸಮೀಕ್ಷೆಯು ಸರ್ಕಾರದ ಅಂಕಿ ಅಂಶಗಳನ್ನು ಒಳಗೊಂಡಿರುವುದರಿಂದ ಎಲ್ಲಾ ಕ್ಷೇತ್ರಗಳಲ್ಲಿ ನೈಜ ಮಾಹಿತಿ ದೊರೆಯುತ್ತದೆ. ಇದು ಪದವಿ ಮಟ್ಟದ IAS ,KAS ಮುಂತಾದ ಪರೀಕ್ಷೆಗಳಿಗೆ ತೂಂಬಾ ಅವಶ್ಯಕ…..ವಿದ್ಯಾರ್ಥಿಗಳು ಈ ವಿಷಯ ಆರಿತುಸಕೊಂಡರೆ ಉಪಯೋಗವಾಗುತ್ತದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಾಯಿರಾಬಾನು ಫರೊಕಿಯವರು ಅಧ್ಯಕ್ಷತೆಯನ್ನು ವಹಿಸಿದ್ದರು, ಮರುಳಸಿದ್ದಪ್ಪ ಎಲ್ ಶ್ಯಾಮಲ ಕೆ ವೆಂಕಟೇಶ್ ಬಾಬು ಯಶೋಧಾ ಆರ್ ಹಾಗೂ ಇತರ ಎಲ್ಲಾ ಅಧ್ಯಾಪಕರು ಭಾಗವಹಿಸಿದ್ದರು.

 
                         
                       
                       
                       
                       
                       
                       
                      