ಡಿಜಿಟಲೀಕರಣ ಮಯವಾದ ಬಜೆಟ್ – ವೆಂಕಟೇಶ್ ಬಾಬು ಎಸ್ ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕರು

ದಾವಣಗೆರೆ: ಕೇಂದ್ರ ಬಜೆಟ್ ಮಂಡನೆಯಾಗಿದ್ದು ಪ್ರತಿಯೊಂದು ಕ್ಷೇತ್ರವನ್ನು ಡಿಜಿಟಲೀಕರಣ ಮಾಡುವಲ್ಲಿ ಹೆಚ್ಚು ಒತ್ತು ನೀಡಿರುವುದು ಸರಿಯಷ್ಟೆ. ಡಿಜಿಟಲ್ ವಿಶ್ವವಿದ್ಯಾಲಯದ ಸ್ಥಾಪನೆ ಸ್ವಾಗತಾರ್ಹ . ತಕ್ಷಣವೇ ಉದ್ಯೋಗ ಸೃಷ್ಟಿಸುವ ಯಾವ ಯೋಜನೆಗಳನ್ನು ಘೋಷಣೆ ಮಾಡಿಲ್ಲ ಇದರಿಂದ ನಿರುದ್ಯೋಗ ಸಮಸ್ಯೆ ಹಾಗೆಯೇ ಉಳಿಯುವಂತಾಗಿದೆ. ನೌಕರರ ಬಹಳ ದಿನಗಳಿಂದ ಇದ್ದ ನಿರೀಕ್ಷೆ ಆದಾಯ ತೆರಿಗೆ ಮೀತಿ ಹೆಚ್ಚಳ ಹುಸಿಯಾಗಿದೆ. ನಮ್ಮ ರಾಜ್ಯಕ್ಕೆ ಯಾವುದೇ ರೀತಿಯ ಕೊಡುಗೆಗಳಿಲ್ಲದ ನಿರಾಶದಾಯಕ ಡಿಜಿಟಲೀಕರಣದ ಬಜೆಟ್ ಎಂದರೆ ತಪ್ಪಾಗಲಾರದು .
ವೆಂಕಟೇಶ್ ಬಾಬು ಎಸ್ ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕರು ಮತ್ತು ಕಾರ್ಯದರ್ಶಿಗಳು ವಾಣಿಜ್ಯಶಾಸ್ತ್ರ ಅಧ್ಯಾಪಕರ ವೇದಿಕೆ ದಾವಣಗೆರೆ.

 
                         
                       
                       
                       
                       
                       
                       
                      