ಬಜೆಟ್ ನಲ್ಲಿ ಸರ್ಕಾರಿ ಶಾಲೆಗಳಲ್ಲಿ ಒನ್ ಕ್ಲಾಸ್ ಒನ್ ಟಿವಿ ಕಾರ್ಯಕ್ರಮ ಜಾರಿ ಸ್ವಾಗತ – ಪವನ್ ರೇವಣಕರ್.

ದಾವಣಗೆರೆ: ಹಿಂದಿನ ಸರ್ಕಾರಗಳು ಸರ್ಕಾರಿ ಶಾಲೆಗಳನ್ನ ಕಡೆಗಣಿಸಿದ್ದವು. ಆದರೆ ಪ್ರಸ್ತುತ ಬಜೆಟ್ ನಲ್ಲಿ ಸರ್ಕಾರಿ ಶಾಲೆಗಳಲ್ಲಿ ಒನ್ ಕ್ಲಾಸ್ ಒನ್ ಟಿವಿ ಕಾರ್ಯಕ್ರಮ ಜಾರಿಗೊಳಿಸಿ ಸರ್ಕಾರಿ ಶಾಲೆಗಳಿಗೆ ಆಧುನಿಕ ಡಿಜಿಟಲ್ ತಂತ್ರಜ್ಞಾನದ ಟಚ್ ನೀಡುವ ಯೋಜನೆ ರೂಪಿಸಲಾಗಿದೆ. ಮಾತೃ ಭಾಷೆಯಲ್ಲೇ ಡಿಜಿಟಲ್ ಪಾಠ ಅಭಿವೃಧ್ದಿ, ವಿಶ್ವದರ್ಜೆಯ ಡಿಜಿಟಲ್ ಯುನಿವರ್ಸಿಟಿ ಸ್ಥಾಪನೆಗೆ ಯೋಜನೆ, ಸಾರ್ವಜನಿಕರ ಸೇವೆಯಲ್ಲಿ ಅಡಚಣೆನ್ನು ಉಂಟು ಮಾಡುತ್ತಿದ್ದ 25 ಸಾವಿರ ಅನವಶ್ಯಕ ನೀಯಮಗಳನ್ನು ರದ್ದು ಮಾಡಲಾಗಿದೆ. ನಕಲಿ ನಾಕರೀಕತೆ ಹಾವಳಿ ತಪ್ಪಿಸಲು ಚಿಪ್ ಆಧಾರಿತ ಹೊಸ ತಂತ್ರಜ್ಞಾನ ಒಳಗೊಂಡ ಇ-ಪಾಸ್ ಪೋರ್ಟ ಜಾರಿಗೆ ಯೋಜನೆ ರೂಪಿಸಲಾಗಿದೆ.
ಪವನ್ ರೇವಣಕರ್
ಸಾಮಾಜಿಕ ಕಾರ್ಯ, ಯುವ ಸಂಕಲ್ಪ ಪ್ರತಿಷ್ಠಾನ.

 
                         
                       
                       
                       
                       
                       
                       
                      