ದೂರದೃಷ್ಟಿಯುಳ್ಳ ಕ್ರಾಂತಿಕಾರಕ ಕೇಂದ್ರ ಬಜೆಟ್: ಬಿಜೆಪಿ ಮಾಜಿ ಮಹಾನಗರ ಪಾಲಿಕೆ ಸದಸ್ಯ ಶಿವನಗೌಡ ಟಿ ಪಾಟೀಲ್ ಹರ್ಷ

ದಾವಣಗೆರೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದ ಬಜೆಟ್ ಕ್ರಾಂತಿಕಾರಕವಾದದ್ದು. ಕೊರೊನಾದಂಥ ಸಂಕಷ್ಟದ ವೇಳೆಯಲ್ಲಿಯೂ ಅತ್ಯುತ್ತಮ ಆಯವ್ಯಯ ಮಂಡನೆ ಮಾಡಿದ್ದಾರ,
ಎಲ್ಲಾ ಸಮುದಾಯದವರನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ಇದು ಭಾರತದ ಅಭಿವೃದ್ಧಿಗೆ ಪೂರಕವಾಗಲಿದೆ. ಮಹಿಳೆಯರು, ರೈಲ್ವೆ, ರೈತರು, ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಪ್ರತಿಯೊಂದು ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಆಯವ್ಯಯ ರೂಪಿಸಲಾಗಿದೆ
ಚುನಾವಣೆ ನಡೆಯುತ್ತಿರುವ ರಾಜ್ಯಗಳಿಗೂ ಕೂಡ ಸರ್ಕಾರ ಯಾವುದೇ ಕೊಡುಗೆ ನೀಡಿಲ್ಲ.. ಜನಪ್ರಿಯ ಬಜೆಟ್ ಗೆ ಬಿಟ್ಟು, ದೂರದೃಷ್ಟಿಯ ಬಜೆಟ್ಟನ್ನು ರಾಷ್ಟ್ರಕ್ಕೆ ಮೋದಿ ಸರ್ಕಾರ ನೀಡಿದೆ.. ಉತ್ತರ ಪ್ರದೇಶದಂಥ ದೊಡ್ಡ ರಾಜ್ಯದ ಚುನಾವಣೆ ಇದ್ದೂ ಕೂಡ ಚುನಾವಣಾ ಬಜೆಟ್ ಮಂಡಿಸಿ ಓಲೈಸದೆ, ಐತಿಹಾಸಿಕ ಬಜೆಟ್ಟನ್ನು ಮೋದಿ ಸರ್ಕಾರ ನಿಡಿದೆ.

 
                         
                       
                       
                       
                       
                       
                       
                      