ದಾವಣಗೆರೆಯಲ್ಲಿ ಓರ್ವ ಪುರುಷ ಕೊವಿಡ್ ಗೆ ಬಲಿ.! 157 ಜನರಿಗೆ ಕೊರೊನಾ ಸೊಂಕು

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಫೆ. ಮೂರರಂದು ರಂದು ಓರ್ವ ಪುರುಷ ಕೊವಿಡ್ ಗೆ ಸಾವನ್ನಪ್ಪಿದ್ದಾರೆ.
157 ಮಂದಿಗೆ ಇಂದು ಕೊರೊನಾ ದೃಡಪಟ್ಟಿದ್ದು ಪ್ರತಿ ದಿನ ಕೊವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇಂದು 169 ಜನ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1128 ಕ್ಕೆ ಬಂದಿದೆ.
ದಾವಣಗೆರೆ 40, ಹರಿಹರ 28, ಜಗಳೂರು ತಾಲೂಕಿನಲ್ಲಿ 27, ಚನ್ನಗಿರಿ ತಾಲ್ಲೂಕಿನಲ್ಲಿ 26, ಹಾಗೂ ಹೊನ್ನಾಳಿ ತಾಲ್ಲೂಕಿನಲ್ಲಿ 29ಮಂದಿಗೆ ಸೋಂಕು ತಗುಲಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊರ ಜಿಲ್ಲೆಗಳ 7 ಮಂದಿಗೆ ಕೊರೊನಾ ವೈರಸ್ ಸೋಂಕು ಇರುವುದು ಖಚಿತವಾಗಿದೆ. ಇನ್ನೂ ಒಟ್ಟು ಇಂದು 169 ಜನರು ಸೊಂಕಿತರು ಗುಣ ಮುಖರಾಗಿದ್ದಾರೆ.
ಇಂದು 6 ರಿಂದ 18 ವರ್ಷದ 73 ಮಕ್ಕಳಿಗೆ ಸೇರಿದಂತೆ ಓರ್ವ 0-5 ವರ್ಷದ ಮಗುವಿಗೆ ಕೊವಿಡ್ ಸೊಂಕು ತಗುಲಿದ್ದು ಒಟ್ಟು 1875 ಮಕ್ಕಳಲ್ಲಿ ಸೊಂಕು ಕಾಣಿಸಿಕೊಂಡಿದೆ.

 
                         
                       
                       
                       
                       
                       
                       
                      