ಎಲೆಬೇತೂರು ಜೋಡಿ ಕೊಲೆ ಆರೋಪಿಗಳ ಬಂಧನ.! ಮೊಮ್ಮಗ ನಿರಾಳ.!
ದಾವಣಗೆರೆ: ಜನವರಿ 24 ರಂದು ಎಲೆಬೇತೂರು ಗ್ರಾಮದಲ್ಲಿ ಬರ್ಬರವಾಗಿ ದಂಪತಿಗಳ ಜೋಡಿ ಕೊಲೆ ನಡೆದ ಪ್ರಕರಣ ರಾಜ್ಯದಲ್ಲಿಯೇ ಸಂಚಲನ ಸೃಷ್ಟಿಸಿತ್ತು, ಜೋಡಿ ಕೊಲೆ ಎನ್ನುವುದಕ್ಕಿಂತ ಹೆಚ್ಚಾಗಿ ಮೊಮ್ಮಗನೇ ತನ್ನ ಅಜ್ಜಿ-ತಾತ ರನ್ನು ಕೊಲೆ ಮಾಡಿದ್ದಾನೆ ಎಂಬ ಅನುಮಾನದಿಂದ ಅವನನ್ನು ಪೊಲೀಸರು ವಶಪಡಿಸಿಕೊಂಡಿದ್ದರ ಪರಿಣಾಮದಿಂದ ಈ ಪ್ರಕರಣ ಅತಿ ಹೆಚ್ಚಿನ ಮಹತ್ವ ಪಡೆದುಕೊಂಡಿತ್ತು ಎಂದರೆ ತಪ್ಪಾಗಲಾರದು.
ಪೊಲೀಸ್ ಶ್ವಾನ ಮೊಮ್ಮಗನ ಬಳಿ ಬಂದು ನಿಂತಿದ್ದ ರ ಪರಿಣಾಮ ಪೊಲೀಸರು ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು, ಅದು ಅವರ ಕರ್ತವ್ಯ ಆದರೆ ನಾಗರಿಕ ಸಮಾಜದ ಅನೇಕರು ಮೊಮ್ಮಗನೇ ಅಪರಾಧಿ ಎಂಬಂತೆ ಬಿಂಬಿಸಿದ್ದು ಮಾತ್ರ ಬೇಸರದ ಸಂಗತಿ
ಇನ್ನು ಕೆಲವು ಹತ್ತಿರದ ಸಂಬಂಧಿಗಳು ಕೊಲೆಯ ಬರ್ಬರತೆಯನ್ನು ಕಣ್ಣಾರೆ ಕಂಡಿದ್ದರು ನಮ್ಮ ಮನೆ ಹುಡುಗ ಈ ರೀತಿ ಮಾಡಲು ಸಾಧ್ಯವೇ ಎಂದು ಸ್ವಲ್ಪವೂ ಯೋಚಿಸದೆ ಕೊಲೆಗಾರ ಇವನೇ ಎಂದು ಸ್ವತಹ ತಾವೇ ತೀರ್ಮಾನಿಸಿ ಅವನ ತಾಯಿ ಹಾಗೂ ತಂಗಿಗೆ ಮಾಡಿದ ನೋವುಗಳಿಗೆ ಮಾತ್ರ ಉತ್ತರವನ್ನು ತಮ್ಮ ಮನಸ್ಸಾಕ್ಷಿಗೆ ಕೇಳಿಕೊಳ್ಳಬೇಕು.
ಪೊಲೀಸ್ ಸಿಬ್ಬಂದಿ ಇಂತಹ ಕ್ಲಿಷ್ಟಕರ ಪ್ರಕರಣವನ್ನು ಬೇಧಿಸಿ ಅಪರಾಧಿಗಳನ್ನು ಬಂಧಿಸುವ ಮೂಲಕ ಕೇವಲ ಅಪರಾಧಿಗಳನ್ನು ಬಂಧಿಸಿದ್ದಷ್ಟೇ ಅಲ್ಲದೇ ನಿರಪರಾಧಿ ಮೊಮ್ಮಗ ಅವನ ತಾಯಿ,ತಂಗಿ ಹಾಗೂ ಅವನು ನಿರಪರಾಧಿಯಾಗಿ ಇರಲಿ ಎಂದು ದೇವರನ್ನು ಬೇಡಿಕೊಳ್ಳುತ್ತಿದ್ದ ಅನೇಕ ರ ಮುಖದಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡಲು ಕಾರಣೀಭೂತರಾದರು ಎಂದರೆ ಉತ್ಪ್ರೇಕ್ಷೆ ಯಾಗದು.
ಅಪರಾಧಿಗಳು ಬಂಧಿಸಿರುವ ಪೊಲೀಸರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ನಿರಪರಾಧಿ ಮೊಮ್ಮಗನಿಗೆ ತಾವು ಆತ್ಮಸ್ಥೈರ್ಯ ತುಂಬಿ ಅವನಿಗೆ ಬೆನ್ನೆಲುಬಾಗಿ ನಿಂತು ಹೊಸ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗಿರಿ ಎಂಬುದಷ್ಟೇ ನಮ್ಮ ಮನವಿ…