ಫೆ. 27 ರಂದು ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಚುನಾವಣೆ
ದಾವಣಗೆರೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮತ್ತು ಜಿಲ್ಲಾ ಘಟಕಗಳ 2022-2025ನೇ ಸಾಲಿಗೆ ಪದಾಧಿಕಾರಿಗಳ ಚುನಾವಣೆಯು ಇದೇ ದಿನಾಂಕ 27 ರ ಭಾನುವಾರ ನಡೆಯಲಿದೆ ಎಂದು ಚುನಾವಣಾಧಿಕಾರಿ ಎಂ ಎಸ್ ಶಿವಶರಣಪ್ಪ ಮಾಹಿತಿ ನೀಡಿದ್ದಾರೆ.
ಸಂಘದ ದಾವಣಗೆರೆ ಜಿಲ್ಲಾ ಘಟಕದ ಚುನಾವಣೆಗೆ ಚುನಾವಣಾಧಿಕಾರಿಯಾಗಿ ಹಿರಿಯ ಪತ್ರಕರ್ತ ಎಂ.ಎಸ್.ಶಿವಶರಣಪ್ಪ, ಸಹಾಯಕ ಚುನಾವಣಾಧಿಕಾರಿಯಾಗಿ ಕೆ.ಸಿ. ಗಿರೀಶ್ ನೇಮಕಗೊಂಡಿದ್ದಾರೆ ಎಂದು ಸಂಘದ ರಾಜ್ಯ ಚುನಾವಣಾಧಿಕಾರಿ ಸು.ತ.ರಾಮೇಗೌಡ ತಿಳಿಸಿದ್ದಾರೆ.
ನಾಳೆ ದಿನಾಂಕ 7ರ ಸೋಮವಾರ ಸಂಘದ ಅರ್ಹ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ದಿನಾಂಕ 9 ರಂದು ಮತದಾರರ ಪಟ್ಟಿಯಲ್ಲಿನ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ದಿನಾಂಕ 11ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ.
ದಿನಾಂಕ 14ರ ಸೋಮವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ದಿನಾಂಕ 16 ರಂದು ನಾಮಪತ್ರಗಳ ಪರಿಶೀಲನೆ, ದಿನಾಂಕ 19 ರಂದು ಉಮೇದುವಾರಿಕೆ ಅರ್ಜಿ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ದಿನಾಂಕ 27 ರ ಭಾನುವಾರ ದಾವಣಗೆರೆಯ ವಾರ್ತಾ ಭವನದಲ್ಲಿ ಚುನಾವಣೆ ನಡೆಯಲಿದ್ದು, ಮತದಾನ ಮಾಡಲು ಸಂಘದ ಗುರುತಿನ ಚೀಟಿ ಕಡ್ಡಾಯವಾಗಿರುತ್ತದೆ. ಸಂಜೆ 4 ಗಂಟೆಗೆ ಮತಗಳ ಎಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ.ಎಸ್.ಶಿವಶರಣಪ್ಪ ವಿವರಿಸಿದ್ದಾರೆ.
ಚುನಾವಣೆಗೆ ಸಂಬಂಧಪಟ್ಟಂತೆ ವಿವರವನ್ನು ವಾರ್ತಾ ಭವನದ ನಾಮಫಲಕದಲ್ಲಿ ಪ್ರಕಟಿಸಲಾಗುತ್ತದೆ.