ಅಸ್ತಂಗತರಾದ ನಾಡಿನ ಹಿರಿಯ ಕವಿ ನಾಡೋಜ ಡಾ.ಚೆನ್ನವೀರ ಕಣವಿ ಅವರಿಗೆ ಶ್ರದ್ಧಾಂಜಲಿ….

ಸಾಧನೆಯ ಉತ್ತುಂಗಕ್ಕೇರಿದ್ದರೂ ಸರಳತೆ ಮತ್ತು ಮೇರು ವ್ಯಕ್ತಿತ್ವದ ಮೂಲಕ ಇತರರಿಗೆ ಮಾದರಿಯಾಗಿದ್ದ ನಾಡೋಜ ಡಾ.ಚೆನ್ನವೀರ ಕಣವಿಯವರ ನಿಧನದಿಂದ ಸಾರಸ್ವತ ಲೋಕ ಒಬ್ಬ ಸರ್ವ ಶ್ರೇಷ್ಠ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಕಂಬನಿ ಮಿಡಿದಿದ್ದಾರೆ.
ಕನ್ನಡದ ಶ್ರೇಷ್ಠ ಕವಿ ಹಾಗೂ ಬರಹಗಾರರಾಗಿದ್ದ ನಾಡೋಜ ಚೆನ್ನವೀರ ಕಣವಿಯವರ ಸತ್ವಯುತ ಬರಹ ಹಾಗೂ ಮೌಲ್ಯಯುತ ಬದುಕು ಅನೇಕರಿಗೆ ಸ್ಪೂರ್ತಿಯುತವಾಗಿತ್ತು. ಆದರ್ಶಪ್ರಾಯವಾದ ತುಂಬು ಜೀವನ ನಡೆಸಿದ ಕಣವಿಯವರು ೧೯೯೬ರಲ್ಲಿ ಹಾಸನದಲ್ಲಿ ನಡೆದ ಅರವತ್ತೈದನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಮತ್ತು ಸಾರಸ್ವತ ಲೋಕದ ಧೀಮಂತ ಶಕ್ತಿಯಾಗಿದ್ದರು ಎಂದು ಕೆ.ರಾಘವೇಂದ್ರ ನಾಯರಿಯವರು ತಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೆ.ರಾಘವೇಂದ್ರ ನಾಯರಿ.
ಗೌರವ ಕೋಶಾಧ್ಯಕ್ಷ
ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
ಮೊ: ೯೮೪೪೩೧೪೫೪೩
ಮಿಂಚಂಚೆ: krnairycbeu@gmail.com