ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ: 44 ನಾಮಪತ್ರ ಅಂಗೀಕಾರ, 4 ನಾಮಪತ್ರ ತಿರಸ್ಕಾರ

ದಾವಣಗೆರೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮತ್ತು ಜಿಲ್ಲಾ ಘಟಕಗಳ 2022-2025 ನೇ ಸಾಲಿಗೆ ಚುನಾವಣೆಯು ಇದೇ ದಿನಾಂಕ 27 ರ ಭಾನುವಾರದಂದು ನಡೆಯಲಿದ್ದು, ಸಂಘದ ನಾಮಪತ್ರಗಳ ಪರಿಶೀಲನೆ ಇಂದು ಪೂರ್ಣಗೊಂಡಿದೆ.
ಅಧ್ಯಕ್ಷ ಸ್ಥಾನಕ್ಕೆ ಇ.ಎಂ. ಮಂಜುನಾಥ್ ಹಾಗೂ ರವಿ.ಆರ್,
ಉಪಾಧ್ಯಕ್ಷ ಸ್ಥಾನಕ್ಕೆ ಪ್ರಕಾಶ್.ಹೆಚ್.ಎಸ್, ಡಿ.ಶ್ರೀನಿವಾಸ್, ಟಿ.ಶ್ರೀನಿವಾಸ್, ಆರ್.ಎಸ್.ತಿಪ್ಪೆಸ್ವಾಮಿ,
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮಾಗನೂರು ಮಂಜಪ್ಪ, ಎ.ಪ್ರಕೃದ್ಧೀನ್,
ಕಾರ್ಯದರ್ಶಿ ಸ್ಥಾನಕ್ಕೆ ಜಿ.ಆರ್.ನಿಂಗೋಜಿರಾವ್, ಬಿ.ಚನ್ನವೀರಯ್ಯ, ಸಿ.ಸತೀಶ್, ಜೆ.ಎಸ್.ವಿರೇಶ್, ಎಸ್.ಹನುಮಂತಪ್ಪ ಹಾಲಿವಾಣ,
ಖಜಾಂಚಿ ಸ್ಥಾನಕ್ಕೆ ಬದರಿನಾಥ್ ಎನ್.ವಿ., ಹೆಚ್.ಎಂ.ಪಿ.ಕುಮಾರ್,
ರಾಜ್ಯಸಮಿತಿ ಸದಸ್ಯ ಸ್ಥಾನಕ್ಕೆ ಕೆ.ಚಂದ್ರಣ್ಣ, ಎಸ್.ಕೆ.ಒಡೆಯರ್ ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ.
ಇನ್ನೂ ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಕ್ಕೆ ಅನಿಲ್ ಕುಮಾರ್.ವಿ.ಬಿ., ಆಂಜನೇಯ.ಎನ್.ಕೆ., ಇಂದುಶೇಖರ.ಎನ್.ಎಂ ಕೃಷ್ಣೋಜಿರಾವ್.ಎನ್., ಎಂ.ಗುರುಮೂರ್ತಿ, ಎ.ಡಿ.ಚಂದ್ರಪ್ಪ ಚಳಗೇರಿ, ಚಂದ್ರಶೇಖರ್.ಹೆಚ್, ಚಿದಾನಂದ.ಎಂ ಜಗದೀಶ್.ಜಿ., ಪ್ರಕಾಶ್.ಎ.ಕೆ., ಎಸ್.ಎನ್.ಬಾಲಾಜಿ, ಮಹಮ್ಮದ್ ತಾರೀಖ್ ನಕಾಶ, ಬಿ.ಎಸ್.ಮುದ್ದಯ್ಯ, ಕೆ.ಸಿ.ಮಂಜುನಾಥ್, ಮಂಜುನಾಥ್.ಎಸ್.ಎಂ, ನಂದನ್ಕುಮಾರ್.ಎನ್, ಎನ್.ಆರ್.ರವಿ, ರಾಜಶೇಖರ್ ಹೆಚ್.ಎಂ, ರಾಮಪ್ರಸಾದ್, ಬಿ.ರುದ್ರಪ್ಪ, ವೇದಮೂರ್ತಿ ಸಿ, ಹೆಚ್.ವೆಂಕಟೇಶ್, ಶ್ರೀಕುಮಾರ್ ಆನೆಕೊಂಡ, ಬಿ.ಪಿ.ಸುಭಾನ್ಸಾಬ್, ಸಂಜಯ್ ಎ.ಪಿ., ಹರೀಶ್.ಸಿ. ರವರ ನಾಮಪತ್ರ ಸಲ್ಲಿಕೆಯಾಗಿದೆ.
ಸುರೇಶ್ ಆರ್. ಕುಣಿಬೆಳಕೆರೆ (ಉಪಾಧ್ಯಕ್ಷ), ಈಶ್ವರಪ್ಪ.ಎನ್ (ಕಾರ್ಯದರ್ಶಿ), ಕೆ.ಉಮೇಶ್ ಹಾಗೂ ಕೆ.ಹೆಚ್.ಗೋವಿಂದರಾಜು (ಕಾರ್ಯಕಾರಿ ಸಮಿತಿ ಸದಸ್ಯ) ಈ ಸ್ಥಾನಗಳಿಗೆ ಸಲ್ಲಿಸಿದ ನಾಮಪತ್ರಗಳು ಕ್ರಮಬದ್ಧವಾಗಿಲ್ಲ ದಿರುವುದರಿಂದ ಇವರ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ಕ.ಕಾ.ಪ.ಸಂ. ಚುನಾವಣಾಧಿಕಾರಿಗಳಾದ ಎಂ.ಎಸ್.ಶಿವಶರಣಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
                         
                       
                       
                       
                       
                       
                       
                      