ಕೊರೋನಾ ತಡೆಗೆ ಶ್ರಮಿಸುತ್ತಿರುವ ಅಧಿಕಾರಿಗಳಿಗೆ ಹಾಗೂ ಆಶಾ ಅಂಗನವಾಡಿ ಕಾರ್ಯಕರ್ತರಿಗೆ ಅಭಿನಂದಿಸಿದ ಶಾಸಕ ಪ್ರೊ, ಎನ್, ಲಿಂಗಣ್ಣ

ದಾವಣಗೆರೆ : ಗ್ರಾಮದಲ್ಲಿ ಆಶಾ ಕಾರ್ಯಕರ್ತೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳ ಜವಾಬ್ದಾರಿ ಕೆಲಸ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ಪ್ರೊ, ಎನ್, ಲಿಂಗಣ್ಣನವರು ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದಲ್ಲಿ ಗುರುವಾರ ನಡೆದ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಆಶಾ ಕಾರ್ಯಕರ್ತರಿಂದ ಗ್ರಾಮದ ಸಂಪೂರ್ಣ ಮಾಹಿತಿ ಪಡೆದು ಅವರು ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ಸಾಕಷ್ಟು ಸಾವು ನೋವುಗಳಾಗಿವೆ ಇಂತಹ ಸಮಯದಲ್ಲಿ ನಾವು ಜವಾಬ್ದಾರಿ ವಹಿಸಬೇಕು ಎಂಬುದು ಮುಖ್ಯವಾಗುತ್ತದೆ ಒಂದನೇ ಅಲೆಯು ಮುಗಿದು ಎರಡನೇ ಅಲೆಯನ್ನು ಹತೋಟಿಗೆ ತರುವಷ್ಟರಲ್ಲಿ ಮೂರನೇ ಅಲೆಯು ಬರಲಿದೆ ಎಂದು ತಜ್ಞರು ಹೇಳಿದ್ದಾರೆ ಆದ್ದರಿಂದ ನಾವು ಗ್ರಾಮಗಳಲ್ಲಿ ಸಾಧ್ಯವಾದಷ್ಟು ಬಹಳ ಎಚ್ಚರಿಕೆಯಿಂದ ನಿಗಾವಹಿಸಿ ಕೆಲಸ ನಿರ್ವಹಿಸಬೇಕಾಗಿದೆ ಎಂದು ಹೇಳಿದರು.
ಕರ್ನಾಟಕ ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಣಬೇರು ಜೀವನ ಮೂರ್ತಿ ಮಾತನಾಡಿ “ಶೀತ ಕೆಮ್ಮು ಜ್ವರ ಯಾರಿಗಾದರೂ ಬಂದಲ್ಲಿ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ ನಂತರ ಪಾಸಿಟಿವ್ ಕಂಡುಬಂದಲ್ಲಿ ಯಾವುದೇ ಸೋಂಕಿತರು ಹೋಂ ಐಸೋಲೇಶನ್ ಗೆ ಒಳಗಾಗದೆ ಹತ್ತಿರದ ಕವಿತೆಗಳಿಗೆ ಹೋಗಿ ಚಿಕಿತ್ಸೆ ಪಡೆಯಬೇಕು. ಹಾಗೂ ಎಲ್ಲರೂ ತಪ್ಪದೆ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದರು.
ಗ್ರಾಮ ಪಂಚಾಯತಿ ಸದಸ್ಯರಾದ ಎಸ್ ನಂಜನಾಯ್ಕ ಮಾತನಾಡಿ “ಗ್ರಾಮಸ್ಥರು ಲಸಿಕೆಯನ್ನು ಪಡೆಯಲು ದೂರದ ಊರಿಗೆ ಹೋಗಬೇಕಾಗಿದೆ ವಾಹನ ವ್ಯವಸ್ಥೆ ಇಲ್ಲದೆ ಹೆಚ್ಚಿನ ಜನರು ಲಸಿಕೆಯನ್ನು ಹಾಕಿಸಿಕೊಂಡು ಇಲ್ಲ ಆದ್ದರಿಂದ ಲಸಿಕೆಯನ್ನು ಗ್ರಾಮಕ್ಕೆ ತರಿಸಿ ಒಂದು ದಿನದ ಕ್ಯಾಂಪ್ ನಡೆಸಬೇಕು ಗ್ರಾಮದ ಹೊರವಲಯದಲ್ಲಿ ಒಂದು ಶಾಲೆ ಇದ್ದು ಅದನ್ನು ಕೋವಿಡ್ ಕೇಂದ್ರವನ್ನಾಗಿಸಬೇಕು ಅದರಿಂದ ಊರಿನ ಸೋಂಕಿತರು ಅಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ ಎಂದು ಶಾಸಕರಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ, ಶ್ಯಾಗಲೆ ದೇವೇಂದ್ರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಡಿ ಪಂಡರಿನಾಥ, ಉಪಾಧ್ಯಕ್ಷೆ ವೆಂಕಟಲಕ್ಷ್ಮಿ,ಹಾಗೂ ಎಲ್ಲಾ ಸದಸ್ಯರು ಆಶಾ ಅಂಗನವಾಡಿ ಕಾರ್ಯಕರ್ತರು ಉಳಿದಂತೆ ಸಿಬ್ಬಂದಿವರ್ಗದವರು ಇದ್ದರು.