ಗರ್ಭಿಣಿ ಮಹಿಳಾ‌ ಪೋಲೀಸ್ ಪೇದೆ ಕೊವಿಡ್ ನಿಂದ ಸಾವು : ಕಂಬನಿ ಮಿಡಿದ ಪೊಲೀಸ್ ಇಲಾಖೆ

honnali pregnant lady constable died due to covid

ಚಂದ್ರಕಲಾ ಗೆ ಭಾವಪೂರ್ಣ ಶ್ರದ್ಧಾಂಜಲಿ’

ದಾವಣಗೆರೆ: ಹೊನ್ನಾಳಿ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರ ಕಛೇರಿಯಲ್ಲಿ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ  ಚಂದ್ರಕಲಾ  ಕೋವಿಡ್ ಸೋಂಕಿನಿಂದ ಚಿಕಿತ್ಸೆ ಪಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ  ಚಂದ್ರಕಲಾ ಕಳೆದ 20 ದಿನಗಳಿಂದ ಶಿವಮೊಗ್ಗ ನಗರದ ಮೆಗ್ಗನ್ ಆಸ್ಪತ್ರೆಯಲ್ಲಿ ನಂತರ ನಾರಾಯಣ ಹೃದಯಾಲಯದಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಂದ್ರಕಲಾ ಅವರು ಗರ್ಭಿಣಿಯಾಗಿದ್ದರು ಇಂದು ಚಿಕಿತ್ಸೆ‌ ಫಲಕಾರಿಯಾಗದೇ ಸಾವನ್ನಪ್ಪಿದರು ಎನ್ನುವುದು ಇನ್ನೂ ದುಃಖದ ವಿಚಾರ.

ಮೃತ ಚಂದ್ರಕಲಾ ಪತಿ ಬೋಜಪ್ಪ ಸಹ ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದುರು. ಈ ದಂಪತಿಗಳಿಗೆ ಒಂದು ವರ್ಷದ ಹೆಣ್ಣು ಮಗು ಸಹ ಇದೆ. ವೈಯಕ್ತಿಕ ಜೀವನವನ್ನು ಮರೆತು ಈ ದಂಪತಿಗಳು ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದು ಈ ಸಾವಿಗೆ ಪೊಲೀಸ್ ಇಲಾಖೆ ಸೇರಿದಂತೆ ಸಮಾಜವೇ ಕಂಬನಿ ಮಿಡಿಯುತ್ತಿದೆ. 

ಚಂದ್ರಕಲಾ ಅವರ ಚಿಕಿತ್ಸೆ ಕೊಡಿಸುವ ಸಂಪೂರ್ಣ ಜವಾಬ್ದಾರಿಯನ್ನು DYSP ಪ್ರಶಾಂತ್ ಮುನ್ನೂರು ಹಾಗು CPI ಟಿ.ವಿ ದೇವರಾಜ್ ಅವರು ತೆಗೆದುಕೊಂಡಿದ್ದುರು ಇಂದು ಬೆಳಗ್ಗೆ CPI ದೇವರಾಜ್ ಅವರು ಚಂದ್ರಕಲಾ ಅವರ ಸಾವಿನ ಸುದ್ದಿ ತಿಳಿಸಿದಾಗ ನಾನು ಒಂದು ಕ್ಷಣ ದಿಗ್ಬ್ರಾಂತನಾದೆ ಅಂತಾರೆ ಶಾಸಕ ರೇಣುಕಾಚಾರ್ಯ.

ಕೊರೊನಾ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಹಾಗು ಸಿಬ್ಬಂದಿಗಳು ತಮ್ನ ಜೀವದ ಹಂಗನ್ನು ತೊರೆದು ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದು, ನನ್ನ ಜನಸೇವೆಯನ್ನು ದೇಶ ಹಾಗು ರಾಜ್ಯದ ಜನತೆ ಕೊಂಡಾಡುತ್ತಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣ ನನ್ನ ಮತ ಕ್ಷೇತ್ರದ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ ಪ್ರತಿಯೊಬ್ಬ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದಿದ್ದಾರೆ.

ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಶ್ರದ್ಧಾಂಜಲಿ:

ದಾವಣಗೆರೆಯಲ್ಲಿ ಇಂದು ಕೊವಿಡ್ ಪರಿಶೀಲನೆ ಸಭೆಯ ಮಧ್ಯೆ  ಚಂದ್ರಕಲಾ ಸಾವಿನ ಸುದ್ದಿಯನ್ನ ತಿಳಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಮೃತರ ಆತ್ಮಕ್ಕೆ ಸರ್ಕಾರದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಿದರು, ಮುಂದಿನವಾರ ಮೃತರ ಮನೆಗೆ ತೆರಳಿ ಸಾಂತ್ವಾನ ಹೇಳುತ್ತೆನೆ ಹಾಗೂ ಸರ್ಕಾರದಿಂದ ಬೇಗನೆ ಪರಿಹಾರ ಕೊಡಿಸಲಾಗುವುದು ಎಂದರು.

Leave a Reply

Your email address will not be published. Required fields are marked *

error: Content is protected !!