129 Page High Court Order: ಹಿಜಾಬ್ ವಿವಾದ, 129 ಪೇಜ್ ನಲ್ಲಿದೆ “ಹೈ ಕೋರ್ಟ್” ಆದೇಶ
ಬೆಂಗಳೂರ್: ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ, ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯವಲ್ಲ ಎಂದು ಹೇಳಿರುವ ಹೈಕೋರ್ಟ್ ಪೀಠ, ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ ಎಂದು ಮಹತ್ವದ ತೀರ್ಪು ನೀಡಿದೆ.
High Court Order
ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯವು ತೀರ್ಪು ಪ್ರಕಟಿಸಿದ ನಂತರ ಸದರಿ ತೀರ್ಪಿನ ಪರವಾಗಿ ಅಥವಾ ವಿರುದ್ಧವಾಗಿ ಫೇಸ್‌ಬುಕ್‌ಗಳಲ್ಲಿ / ವಾಟ್ಸಪ್‌ಗಳಲ್ಲಿ / ಟ್ವಿಟರ್‌ಗಳಲ್ಲಿ ಹಾಗೂ ಯಾವುದೇ ರೀತಿಯ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ರವಾನಿಸುವುದು ಮತ್ತು ಪ್ರಚುರಪಡಿಸುವುದನ್ನು ನಿಷೇಧಿಸಲಾಗಿದೆ ಎಂಬುದನ್ನು ಸೇರ್ಪಡೆಗೊಳಿಸಿ ಅದೇಶಿಸಲಾಗಿದೆ.