ರಷ್ಯಾ-ಉಕ್ರೇನ್ ಯುದ್ಧ ದಿನ 26: ಶರಾಣಗತಿಗೆ ಡೆಡ್‌ಲೈನ್
ಕೀವ್ : ರಷ್ಯಾ-ಉಕ್ರೇನ್ ಯುದ್ಧವು ಇಂದು 26ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್ ಸೇನೆಯು ಮಾರಿಯುಪೋಲ್‌ನಲ್ಲಿ ರಷ್ಯಾದ ನೌಕಾಪಡೆಯ ಹಿರಿಯ ಕಮಾಂಡರ್ ಅನ್ನು ಹತ್ಯೆ ಮಾಡಿದ್ದೇವೆ ಎಂದು ಹೇಳಿಕೊಂಡಿದೆ. ಹಾಗೆಯೇ ಮಾರಿಯುಪೋಲ್‌ಗೆ ಶರಣಾಗಲು ಒಂದು ದಿನದ ಗಡುವನ್ನು ನೀಡಿದೆ. ಇಂದು ಶರಣಾಗಬೇಕು, ಇಲ್ಲವಾದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎಂದು ರಷ್ಯಾ ಸೇನೆ ಹೇಳಿದೆ. ಸೆವಾಸ್ಟೊಪೋಲ್ ಗವರ್ನರ್ ಮಿಖಾಯಿಲ್ ರಜ್ವೊಝೇವ್ ಅವರು ವ್ಲಾಡಿಮಿರ್ ಪುಟಿನ್ ಪಡೆಗಳಿಗೆ ಪ್ರತಿ ಏಟು ಎಂಬಂತೆ ಹೇಳಿಕೆಯೊಂದನ್ನು ನೀಡಿದ್ದಾರೆ. ರಷ್ಯಾದ ಕಪು ಸಮುದ್ರದ ಫ್ಲೀಟ್‌ನ ಉಪ ಕಮಾಂಡರ್ ಅನ್ನು ಗುಂಡಿಕ್ಕಿ ಕೊಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಹಿರಿಯ ನೌಕಾ ಅಧಿಕಾರಿ ಕ್ಯಾಪ್ಟನ್ ಆಂಡ್ರೆ ಪಾಲಿಯ್ ಉಕ್ರೇನ್‌ನಲ್ಲಿ ನಡೆದ ಯುದ್ಧದಲ್ಲಿ ಕೊಲ್ಲಲ್ಪಟ್ಟರು ಎಂದು ವರದಿ ಉಲ್ಲೇಖ ಮಾಡಿದೆ. ಆದರೆ ಕೀವ್ ಐದು ಸೇನಾ ಜನರಲ್‌ಗಳನ್ನು ಕೊಂದಿರುವುದಾಗಿ ಹೇಳಿಕೊಂಡಿದೆ.
ಮಾರಿಯುಪೋಲ್ ನಗರದ ಅಂತಿಮ ಆಕ್ರಮಣಕ್ಕೆ ತಯಾರಿ ನಡೆಸುತ್ತಿರುವ ರಷ್ಯಾ ಮಾತ್ರ ಈ ಹೇಳಿಕೆಯನ್ನು ನಿರಾಕರಿಸಿದೆ. ಭಾನುವಾರ ರಾತ್ರಿಯೇ ಶರಣಾಗುವಂತೆ ರಷ್ಯಾವು ಮಾರಿಯುಪೋಲ್ ಆಡಳಿತಕ್ಕೆ ಹೇಳಿದೆ. ಮಾಸ್ಕೋ ಕಾಲಮಾನ ಪ್ರಕಾರ ಬೆಳಿಗ್ಗೆ 5 ಗಂಟೆಗೆ (ಭಾರತೀಯ ಕಾಲಮಾನ ಬೆಳಿಗ್ಗೆ 7.30) ಗಡುವನ್ನು ನಿಗದಿ ಪಡಿಸಲಾಗಿದೆ. ಇದಾಗ ಬಳಿಕ ದಾಳಿ ನಡೆಸಿದ ನಗರವನ್ನು ಸಂಪೂರ್ಣವಾಗಿ ನಾವು ಹತೋಟಿಗೆ ಪಡೆದುಕೊಳ್ಳುತ್ತೇವೆ ಎಂದು ರಷ್ಯಾ ಹೇಳಿಕೊಂಡಿದೆ. ಈ ನಡುವೆ ಯಹೂದಿಗಳನ್ನು ರಕ್ಷಣೆ ಮಾಡುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ ಇಸ್ರೇಲ್‌ಗೆ ಮನವಿ ಮಾಡಿದ್ದಾರೆ. “ನಿಮ್ಮ ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ಅತ್ಯುತ್ತಮವಾಗಿದೆ ಎಂದು ಎಲ್ಲರಿಗೂ ತಿಳಿದಿದೆ. ನೀವು ಖಂಡಿತವಾಗಿಯೂ ನಮ್ಮ ಜನರಿಗೆ ಸಹಾಯ ಮಾಡುತ್ತೀರಿ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ. ಇಸ್ರೇಲಿ ವಿದೇಶಾಂಗ ಸಚಿವ ಜೈರ್ ಲ್ಯಾಪಿಡ್, “ನಾವು ಉಕ್ರೇನ್‌ಗೆ ಕೈಲಾದಷ್ಟು ಸಹಾಯ ಮಾಡುತ್ತೇವೆ,” ಎಂದು ಹೇಳಿದ್ದಾರೆ.