ತಮಿಳುನಾಡಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಪ್ರಚಾರ. ನಗರಾಭಿವೃದ್ಧಿ ಸಚಿವರಾದ ಶ್ರೀ ಬಿ.ಎ.ಬಸವರಾಜ ಪ್ರಮುಖ ಚುನಾವಣಾ ಪ್ರಚಾರದ ಉಸ್ತುವಾರಿ.

ಚೆನ್ನೈ:
ತಮಿಳುನಾಡಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಪ್ರಚಾರ.
ನಗರಾಭಿವೃದ್ಧಿ ಸಚಿವರಾದ ಶ್ರೀ ಬಿ.ಎ.ಬಸವರಾಜ ಚುನಾವಣಾ ಪ್ರಚಾರದ ಉಸ್ತುವಾರಿ
2021ರ ಎಪ್ರಿಲ್ 6 ರಂದು ತಮಿಳುನಾಡಿನ ವಿಧಾನ ಸಭೆಗೆ ಚುನಾವಣೆ ನಡೆಯಲಿದ್ದು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಿರುಪ್ಪೂರು ಜಿಲ್ಲೆಯ ಧಾರಪುರಂ ಕ್ಷೇತ್ರದಲ್ಲಿ ದಿನಾಂಕ 30-3-2021 ರಂದು ಪ್ರಚಾರ ನಡೆಸಿದರು.ಚುನಾವಣಾ ಪ್ರಚಾರದ ಉಸ್ತುವಾರಿ ವಹಿಸಿರುವ ನಗರಾಭಿವೃದ್ಧಿ ಸಚಿವರಾದ ಶ್ರೀ ಬಿ.ಎ.ಬಸವರಾಜ, ತಮಿಳುನಾಡು ಭಾಜಪ ಅಧ್ಯಕ್ಷರು ಹಾಗೂ ಧಾರಾಪುರಂ ಕ್ಷೇತ್ರದ ಅಭ್ಯರ್ಥಿ ಡಾ.ಎಲ್. ಮುರುಗನ್, ತಮಿಳುನಾಡಿನ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಘವನ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಆಯುಧವಾದ ವೇಲಾಯುಧನ್ ಅನ್ನು ಮಾನ್ಯ ಪ್ರಧಾನ ಮಂತ್ರಿಗಳಿಗೆ ಗೌರವಪೂರ್ವಕವಾಗಿ ನೀಡಲಾಯಿತು.
ಪ್ರಮುಖ ಪ್ರಚಾರದಲ್ಲಿ ಅಭ್ಯರ್ಥಿಗಳು ಭಾಗಿಯಾಗಿದ್ದರು.

 
                         
                       
                       
                       
                       
                       
                       
                      