ಕೋವಿಡ್ ನಂತರ ನಡೆಯಲಿರುವ ಯುಗಾದಿ ಜಾತ್ರೆಗೆ ಸಿದ್ಧಗೊಂಡಿರುವ ಹಾಲಮ್ಮನ ತೋಪು
ಉಚ್ಚoಗಿದುರ್ಗ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ಪ್ರತಿ ವರ್ಷ ಯುಗಾದಿಗೆ ಉಚ್ಚoಗೆಮ್ಮನ ಜಾತ್ರಾ ಮಹೋತ್ಸವ ಗ್ರಾಮದ ಹಾಲಮ್ಮನ ತೋಫಿನಲ್ಲಿ ಮಾ.31 ರಿಂದ ಏ.04 ರವರೆಗೂ ನಡೆಯಲಿದ್ದು ಕೋವಿಡ್-19 ನಿಂದ ಕಳೆದ ಎರಡು ವರ್ಷ ಜಾತ್ರೆಗೆ ನಿರ್ಬಂದ ಹೇರಿದ್ದು ಈ ವರ್ಷ ಕೋವಿಡ್ ಸೋಂಕು ಕಡಿಮೆಯಾದ ಕಾರಣ ಜಾತ್ರೆ ನಡೆಯಲಿದ್ದು ಬರುವ ಭಕ್ತರಿಗೆ ಯಾವುದೇ ಮೂಲ ಸೌಕರ್ಯ ಕೊರತೆಯಾಗದಂತೆ ತಾಲ್ಲೂಕು ಆಡಳಿತ, ಉಚ್ಚoಗಿದುರ್ಗ ಗ್ರಾಮ ಪಂಚಾಯಿತಿ, ಶ್ರೀ ಹಾಲಮ್ಮ ದೇವಸ್ಥಾನದ ಸಮಿತಿ, ಪೊಲೀಸ್ ಇಲಾಖೆ,ಆರೋಗ್ಯ ಇಲಾಖೆ, ಮಹಿಳಾ ಮತ್ತು ಕಲ್ಯಾಣ ಇಲಾಖೆಗಳ ಆಧಿಕಾರಿಗಳು ನಿಗಾ ವಹಿಸಿದ್ದಾರೆ.
ಈ ವೇಳೆ ಮಾತನಾಡಿದ ತಹಶೀಲ್ದಾರ್ ಪ್ರಭಾಕರ್ ಗೌಡ ಯುಗಾದಿ ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ಮೂಲ ಸೌಕರ್ಯಕ್ಕೆ ಕೊರತೆಯಾಗದಂತೆ ಹಾಗೂ ದೇವದಾಸಿ ಪದ್ಧತಿ ಆಚರಣೆ ನಡೆಯದಂತೆ ಸಂಬಂಧಪಟ್ಟ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹರಪನಹಳ್ಳಿ ಡಿವೈಎಸ್ಪಿ,ಸಿಪಿಐ ನಾಗರಾಜ್ ಕಮ್ಮಾರ್, ತಹಶೀಲ್ದಾರ್ ಪ್ರಭಾಕರ್ ಗೌಡ,ಸ್ಥಳಕ್ಕೆ ಆಗಮಿಸಿ ಜಾತ್ರೆಯ ಪೂರ್ವ ಸಿದ್ಧತೆ ಬಗ್ಗೆ ವೀಕ್ಷಣೆ ಮಾಡಿದರು…