ಕೆಲಸದಿಂದ ಅಮಾನತು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಆತ್ಮಹತ್ಯೆ

ದಾವಣಗೆರೆ: ತಾಲೂಕಿನ ಶ್ಯಾಗಲೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯೊಬ್ಬರು ನೇಣು ಹಾಕಿಕೊಂಡು ಸಾವನ್ನಪಿದ್ದಾರೆ.ಬಿ. ಎನ್. ಚಂದ್ರಪ್ಪ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.ಸಾವಿಗೂ ಮುನ್ನ ಪತ್ರ ಬರೆದಿಟ್ಟು ನೇಣುಹಾಕಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದ ಅವರಿಗೆ ಬರಬೇಕಾದ ಸಂಬಳ ಕೊಟ್ಟಿಲ್ಲ ಸಂಬಳ ಮಂಜೂರು ಮಾಡಲು 1 ಲಕ್ಷ ರೂಪಾಯಿ ಸಹಕಾರ ಸಂಘಗಳ ಕಚೇರಿಯಲ್ಲಿನ ಸಿಬ್ಬಂದಿಯೊಬ್ಬರು ಲಂಚ ಕೇಳಿದ್ದರು. ಹೇಗೋ ಹಣ ಹೊಂದಿಸಿ 20 ಸಾವಿರ ಕೊಟ್ಟರೂ ಸಂಬಳ ಕೊಡದೆ ಹಣ ದುರ್ಬಳಕೆ ಆರೋಪದ ಮೇಲೆ ಕೆಲವರ ಚಿತಾ ವಣೆಯಿಂದ ನನ್ನನ್ನು ಅಮಾನತ್ತು ಮಾಡಲಾಗಿದೆ. ಸಂಬಳವಿಲ್ಲದೆ ಸಂಸಾರ ನಡೆಸುವುದು ಕಷ್ಟ ವಾಗಿದ್ದು ಬೇರೆ ದಾರಿ ಇಲ್ಲದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ,ಪತ್ರದಲ್ಲಿ ಬರೆದಿದ್ದಾರೆ. ನಾನು ಸೊಸೈಟಿ ಯಲ್ಲಿ ಯಾವುದೇ ಹಣ ದುರುಪಯೋಗ ಮಾಡಿಲ್ಲ.ನಾನು ನಿರಾಪರಾಧಿ ಎಂದು ಪತ್ರದಲ್ಲಿ ಬರೆದು ಸಹಿ ಮಾಡಿದ್ದಾರೆ.ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.