ಪ್ರಜಾಕೀಯ ಪಕ್ಷದಿಂದ ಬರುವ ಚುನಾವಣೆಗಾಗಿ ಸೀರೆ ಹಂಚುತ್ತಿದ್ದಾರಂತೆ ? ಮತ ಕಬಳಿಕೆಗೆ ಸೀರೆ ಹಂಚುತ್ತಿದ್ದಾರಾ?

ವಿದ್ಯಾನಾಯ್ಕ್ ಅರೇಹಳ್ಳಿ
ದಾವಣಗೆರೆ : ಸಭೆ, ಸಮಾರಂಭ, ಹೋರಾಟ, ರ‍್ಯಾಲಿ, ಬಂದ್, ಹಣ ಕೊಡುವುದು, ಕೊಟ್ಟ ಹಣವನ್ನು ಹಿಂಪಡೆಯುವುದು, ಸೀರೆ, ಫ್ರಿಜ್, ಕುಕ್ಕರ್ ಕೊಡುವುದು ಇದ್ಯಾವುದು ಪ್ರಜಾಕೀಯ ಪಕ್ಷದಲ್ಲಿ ಇರುವುದಿಲ್ಲ ಅಂತ ಹೇಳಿ ಇದೀಗ ಪ್ರಜಾಕೀಯ ಪಕ್ಷದಿಂದ ಸೀರೆ ಹಂಚುತ್ತಿದ್ದಾರಂತೆ ! ಹೌದ, ಪ್ರಜಾಕೀಯ ಪಕ್ಷದಿಂದ ಸೀರೆ ಹಂಚುತ್ತಿದ್ದಾರಾ? ಹೇಗೆ ಅನ್ನೋ ಗೊಂದಲ ಕಾಡುತ್ತಿದೆ ಅಲ್ಲವೇ, ಮುಂದೆ ಓದಿ
ಪ್ರಜಾಕೀಯ ಪಕ್ಷದ ಅಭಿಮಾನಿಯೊಬ್ಬರು ಪ್ರಜಾಕೀಯದ ಸೀರೆ ಹಂಚಲು ಮುಂದಾಗಿದ್ದಾರೆ. ಚುನಾವಣೆ ಉದ್ದೇಶದಿಂದ ಪುಕ್ಸಟ್ಟೆಯಾಗಿ ಕೊಡೋ ರೀತಿ ಅಲ್ಲ, ಪ್ರಜಾಕೀಯ ಪಕ್ಷದ ಅಭಿಮಾನದಿಂದ ಸೀರೆಯಲ್ಲಿ ಪ್ರಜಾಕೀಯ ಪಕ್ಷದ www.prajaakeeya.org ವೆಬ್‌ಸೈಟ್ ಅನ್ನು ಮುದ್ರಿಸಿ ಪ್ರಜಾಕೀಯ ಪಕ್ಷದ ಬಗೆಗಿನ ತಮ್ಮ ಅಭಿಮಾನವನ್ನು ಬಿಂಬಿಸಿದ್ದಾರೆ.
ಹೌದು, ಬೆಳಗಾವಿಯಲ್ಲಿರುವ ಶಾಂತ ಸೀಲ್ಕ್ ಸ್ಯಾರಿನ ಮಾಲೀಕರಾದ ರವಿ ಅವರು, ಪ್ರಜಾಕೀಯ ಪಕ್ಷದ ಅಭಿಮಾನಿ, ಇವರದ್ದು ಮೂರು ಸೀರೆ ತಯಾರಿಕಾ ಫ್ಯಾಕ್ಟರಿ ಇದ್ದು ನೂತನ ಶೈಲಿಯಲ್ಲಿ ಪ್ರಜಾಕೀಯ ಹೆಸರು ಮತ್ತು ವೆಬ್‌ಸೈಟ್ ಮುದ್ರಿತಗೊಂಡ ಸೀರೆಗಳನ್ನು ತಯಾರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆಗೂ ಕಾರಣವಾಗಿತ್ತು.
ಪ್ರಜಾಕೀಯದ ಸೀರೆಗಳಿಗೆ ಭಾರೀ ಬೇಡಿಕೆಯ ಕರೆ:
ಪ್ರಜಾಕೀಯ ಪಕ್ಷದ ವೆಬ್‌ಸೈಟ್, ಹೆಸರು ಹಾಗೂ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಎಂದು ಮುದ್ರಿಸಿ ನೂತನ ಶೈಲಿಯಲ್ಲಿ ಮುದ್ರಿಸಲಾಗುತ್ತಿರುವ ಈ ಸೀರೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಾರೀ ಬೇಡಿಕೆ ಬಂದಿದೆ ಎಂದು ಶಾಂತ ಸೀಲ್ಕ್ ಸ್ಯಾರೀಸ್‌ನ ಮಾಲೀಕ ರವಿ ಗರುಡವಾಯ್ಸ್ ಗೆ ತಿಳಿಸಿದರು.
ಆರ್ಟ್ (art) ಸೀರೆ :
ನೂತನ ಮಾದರಿಯಲ್ಲಿ ಪ್ರಜಾಕೀಯದ ವೆಬ್‌ಸೈಟ್, ಹೆಸರು ಮುದ್ರಿತ ಈ ಸೀರೆಯನ್ನು ಆರ್ಟ್ ಸೀರೆ ಎಂದು ಕರೆಯಲಾಗುತ್ತದೆಯಂತೆ. ಉತ್ತಮ ಗುಣಮಟ್ಟದ ಈ ಸೀರೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಸೀರೆ ತಯಾರಾಗಿ ಮಾರುಕಟ್ಟೆಯ ರಿಟೇಲ್ ದರ 3000 ಸಾವಿರಕ್ಕೂ ಹೆಚ್ಚಿದೆ. ಆದರೆ ಪ್ರಜಾಕೀಯದ ಅಭಿಮಾನದ ಮೇಲೆ ಹಾಗೂ ತಮ್ಮದೇ ಸೀರೆಯ ಫ್ಯಾಕ್ಟರಿ ಇರುವ ಕಾರಣದಿಂದ ಇದನ್ನು ಕಡಿಮೆ ದರದಲ್ಲಿ ಅಂದರೆ 1400ರೂಗಳಿಗೆ ಇದನ್ನು ಮಾರಾಟ ಮಾಡಲಾಗುತ್ತಿದೆ. ಇದರ ಡಿಸೈನ್‌ಗಾಗಿಯೇ 20 ಸಾವಿರ ರೂ. ವೆಚ್ಚವಾಗುತ್ತದೆ ಅಗತ್ಯವಿರುವ ಗ್ರಾಹಕರು ಈ ಸೀರೆಗಳನ್ನು ಕೊಳ್ಳಬಹುದು.
ಕೋರಿಯರ್ ಮೂಲಕ ಮನೆಗೆ ತಲುಪಲಿದೆ ಸೀರೆ!:
ರಾಜ್ಯದ ವಿವಿಧ ಮೂಲಗಳಿಂದ ಪ್ರಜಾಕೀಯದ ಈ ಸೀರೆಗೆ ಭಾರೀ ಬೇಡಿಕೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ನಂತರ ಒಂದೇ ದಿನಕ್ಕೆ ಸುಮಾರು 15ಕ್ಕೂ ಹೆಚ್ಚು ದೂರವಾಣಿ ಕರೆ ಬಂದಿದೆ. ದೂರವಾಣಿ ಕರೆ ಮಾಡಿದ ಎಲ್ಲ ಜನ ಸ್ಯಾಂಪಲ್ ಕಳಿಸಿ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಸೀರೆ ಬೇಕು ಎನ್ನುವ ಗ್ರಾಹಕರಿಗೆ ಕೋರಿಯರ್ ಮೂಲಕವೂ ಅವರಿರುವ ಸ್ಥಳಕ್ಕೆ ಕಳುಹಿಸಿಕೊಡುತ್ತೇವೆ. ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಸಂದಾಯ ಮಾಡಬಹುದು ಎಂದರು ರವಿ.