ಆಕಾಶದಿಂದ ಬೊದ್ದಿದ್ದೇನು ಗೊತ್ತಾ? ಮಹಾರಾಷ್ಟ್ರದಲ್ಲಿ ಮಹಾಶ್ಚರ್ಯ!

ಬೆಂಗಳೂರು : ಒಂದು ಬಗೆಯ ಮೆಟಲ್ ರಿಂಗ್ ಮತ್ತು ಸಿಲಿಂಡರ್ ಆಕೃತಿಯ ವಸ್ತುವೊಂದು ಮಹರಾಷ್ಟçದ ಚಂದ್ರಾಪುರ್‌ನಲ್ಲಿ ಕಾಣಿಸಿಕೊಂಡಿದೆ. ರಾತ್ರಿ ಆಕಾಶದಲ್ಲಿ ಹೊತ್ತಿ ಉರಿಯುತ್ತಿರುವ ವಸ್ತುವೊಂದು ಕಾಣಿಸಿಕೊಂಡಿತ್ತು. ಅದಾದ ನಂತರ ಸುಮಾರು 3 ಮೀಟರ್ ಉದ್ದದ ಮೆಟಲ್ ರಿಂಗ್ ಅನ್ನು ಸಿಂದೆವಹಿ ಎಂಬ ಊರಿನಲ್ಲಿ ನೋಡಿದರು. ಮತ್ತೊಂದು ಗ್ರಾಮದಲ್ಲಿ ಸಿಲಿಂಡರ್ ಆಕೃತಿಯ ವಸ್ತು ಸಿಕ್ಕಿದೆ. ಇದರ ಬೆನ್ನಲ್ಲೆ ಇವತ್ತು ಮುಂಬೈನ ಡಿಸಾಸ್ಟರ್ ಮ್ಯಾನೆಜ್‌ಮೆಂಟ್ ಟೀಮ್ ಚಂದ್ರಾಪುರಕ್ಕೆ ಭೇಟಿ ನೀಡಲಿದ್ದು ವಸ್ತುಗಳನ್ನ ಪರಿಶೀಲಿಸಲಿದ್ಧಾರೆ.