ಮಂಡ್ಯ ಹಾಲು ಒಕ್ಕೂಟದ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಸಿ ಐ ಡಿ ತನಿಖೆಗೆ ಆದೇಶಿಸಿದ ಬಿ ಎಸ್ ವೈ
ಬೆಂಗಳೂರು: ಮಂಡ್ಯ ಹಾಲು ಒಕ್ಕೂಟದಲ್ಲಿ ಹಾಲಿಗೆ ನೀರು ಕಲಬೆರೆಕೆ ಮಾಡಿ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದು ಬೆಳಕಿಗೆ ಬಂದಿದ್ದು, ತಪ್ಪಿತಸ್ಥ ಐದು ಅಧಿಕಾರಿಗಳನ್ನು ಅಮಾನತ್ತಿನಲ್ಲಿಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯ ನಡೆಸಿ ಮಾತನಾಡಿರುವ ಅವರು, ಈಗಾಗಲೇ ಹಾಲು ಒಕ್ಕೂಟದ ಪ್ರಾಥಮಿಕ ತನಿಖೆಗೆ ಆದೇಶಿಸಲಾಗಿದ್ದು, ಹೊಸ ವ್ಯವಸ್ಥಾಪ ನಿರ್ದೇಶಕರನ್ನು ನೇಮಿಸಲಾಗಿದೆ. ತಪ್ಪು ಎಸಗಿರುವ ಹಾಲು ಒಕ್ಕೂಟದ ಸಹಕಾರ ಸಂಘಗಳ ಮೇಲೆ ವಿಚಾರಣೆ ನಡೆಸಲು ಆದೇಶ ಹೊರಡಿಸಲಾಗಿದೆ. ಸಿಐಡಿ ತನಿಖೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದರು.
ಬಿ ಎಸ್ ಯಡಿಯೂರಪ್ಪ ಮಂಡ್ಯ ಹಾಲು ಓಕ್ಕೂಟದ ಪ್ರಕರಣದ ಬಗ್ಗೆ ಎನಂದ್ರೂ…? ವಿಡಿಯೋ ನೀಡಿ.