ಜಿಎಂಐಟಿ ಗೆ ಗ್ರೀನ್ ಇನ್ಸ್ಟಿಟ್ಯೂಷನಲ್ ರ್ಯಾಂಕಿಂಗ್ ಪ್ರಶಸ್ತಿ

gmit

ದಾವಣಗೆರೆ :ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯ ಇತ್ತೀಚಿಗೆ ನಡೆದ ಆರ್ ವರ್ಲ್ಡ್ ಇನ್ಸ್ತಿಟ್ಯೂಷನಲ್ ರ್ಯಾಂಕಿಂಗ್ 2022 ನಲ್ಲಿ ಪಾಲ್ಗೊಂಡು ಅತ್ಯುತ್ತಮ ಗ್ರೀನ್ ಇನ್ಸ್ತಿಟ್ಯೂಷನಲ್ ರ್ಯಾಂಕಿಂಗ್ ಪ್ರಶಸ್ತಿಗೆ ಭಾಜನವಾಗಿದೆ. ಜಿಎಂಐಟಿ ಕಾಲೇಜು, ಆರೋಗ್ಯಕರ ಪರಿಸರದಲ್ಲಿ ಜಾಗತಿಕವಾಗಿ ಸಮಗ್ರ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದು, ಆರ್ ವರ್ಲ್ಡ್ ಇನ್ಸ್ತಿಟ್ಯೂಷನಲ್ ರ್ಯಾಂಕಿಂಗ್ ಸಂಸ್ಥೆಯು ಅಭಿನಂದನೆಯನ್ನು ತಿಳಿಸಿದ್ದು, ಪ್ರಶಸ್ತಿಯನ್ನು ಪ್ರದಾನ ಮಾಡಿದೆ.

ಭಾರತದಾದ್ಯಂತ ವಿವಿಧ ಶಿಕ್ಷಣ ಸಂಸ್ಥೆಗಳು ಗ್ರೀನ್ ಇನ್ಸ್ತಿಟ್ಯೂಷನಲ್ ರ್ಯಾಂಕಿಂಗ್ 2022 ವಿಭಾಗದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು . ಇದರಲ್ಲಿ ಜಿಎಂಐಟಿ ಕಾಲೇಜಿಗೆ 62ನೇ ಸ್ಥಾನ ಲಭಿಸಿದ್ದು, ಹರ್ಷವನ್ನುಂಟು ಮಾಡಿದೆ. ಈ ಸ್ಪರ್ಧೆಗೆ ಬೇಕಾದ ಎಲ್ಲಾ ತಯಾರಿಯನ್ನು ಉಸ್ತುವಾರಿ ವಹಿಸಿದ್ದ ಮೆಕ್ಯಾನಿಕಲ್ ವಿಭಾಗದ ಪ್ರೊ ಶಿವಪ್ರಕಾಶ್, ತಮ್ಮ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

ಕಾಲೇಜಿನ ಚೇರ್ಮನ್ ಜಿಎಂ ಲಿಂಗರಾಜು, ಆಡಳಿತಾಧಿಕಾರಿ ವೈ.ಯು ಸುಭಾಶ್ಚಂದ್ರ, ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್, ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ ಆರ್, ವಿವಿಧ ವಿಭಾಗಗಳ ಮುಖ್ಯಸ್ಥರು ಗಳು, ಪ್ರಾಧ್ಯಾಪಕ ವರ್ಗದವರು
ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

ಸುದ್ದಿಗಾಗಿ ಸಂಪರ್ಕಿಸಿ: garudavoice21@gmail.com
9740365719

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!