ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಪಾರ್ಕಿಂಗ್‌ಗೆ ಹೆಚ್ಚಿನ ದರ ವಸೂಲಿ.! ರಶೀದಿ ಕೇಳಿದ್ರೆ ದರ್ಪದ ಮಾತು.!

ದಾವಣಗೆರೆ : ನಗರದ ಸರಕಾರಿ ಹೈಸ್ಕೂಲ್ ಮೈದಾನದಲ್ಲಿರುವ ತಾತ್ಕಾಲಿಕ Davanagere High School Filed ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ದ್ವಿ ಚಕ್ರ ವಾಹನಗಳ ನಿಲುಗಡೆಗೆ Ksrtc Bus Stand ನಿಗದಿಗಿಂತ ಅಧಿಕ ಶುಲ್ಕವನ್ನು ಗುತ್ತಿಗೆದಾರ ವಸೂಲಿ ಮಾಡುತ್ತಿದ್ದು ಬೈಕ್ ಸವಾರರಿಗೆ Two Wheeler Parking Fees Hike ತೊಂದರೆ ಆಗಿದೆ, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂಬ ಒತ್ತಡ ಜನರಿಂದ ಕೇಳಿ ಬಂದಿದೆ.
ಟೆಂಡರ್ ಒಪ್ಪಂದದ ಅನ್ವಯ ಪ್ರತಿ ದ್ವಿಚಕ್ರ ವಾಹನಕ್ಕೆ ದಿನಕ್ಕೆ 25 ರೂ. ದರ ನಿಗದಿಪಡಿಸಬೇಕು. ಆದರೆ ಗುತ್ತಿಗೆದಾರ 35 ರೂ. ವಸೂಲಿ ಮಾಡುತ್ತಿದ್ದು, ಇದಕ್ಕೆ ಯಾವ ರಶೀದಿಯನ್ನೂ ಕೊಡುತ್ತಿಲ್ಲ. ರಶೀದಿ ಕೇಳಿದರೆ ದರ್ಪದಿಂದ ವಾಹನ ಚಾಲಕರಿಗೆ ಧಮ್ಕಿ ಹಾಕುವ ಧಾಟಿಯಲ್ಲಿ ಮಾತನಾಡುತ್ತಾರೆ ಎಂದು ಜನರು ಆರೋಪಿಸುತ್ತಾರೆ.
ಹಾಗೆ ನೋಡಿದರೆ ಇಲ್ಲಿ ಪಾರ್ಕಿಂಗ್ ಮಾಡುವ ವಾಹನಗಳಿಗೆ ಮಳೆ, ಬಿಸಿಲಿನ ರಕ್ಷಣೆ ಮೇಲ್ಛಾವಣಿ ವ್ಯವಸ್ಥೆಯೂ ಇಲ್ಲ. ಜತೆಗೆ ಇಲ್ಲಿ ದರ ನಿಗದಿತ ಕುರಿತ ಲಕ ಇರುವುದು ಕಡ್ಡಾಯ. ಆದರೆ ಇಲ್ಲಿ ಅದಾವ ನಿಯಮಗಳಿಗೂ ಬೆಲೆ ಇಲ್ಲ. ಪಾರ್ಕಿಂಗ್ ಸುತ್ತ ಯಾವುದೇ ಜಾಗದಲ್ಲಿ ಹುಡುಕಿದರೂ ದರ ನಿಗದಿ ಲಕ್ಷಣ ಕಾಣುವುದೇ ಇಲ್ಲ.
ಈ ಸ್ಥಳವನ್ನು ಗುತ್ತಿಗೆದಾರ ತಿಂಗಳಿಗೆ ಕೇವಲ 40 ಸಾವಿರ ರೂ.ಗೆ ಬಾಡಿಗೆ ಪಡೆದಿದ್ದಾರೆ. ಇಲ್ಲಿ ನಿತ್ಯ ಕನಿಷ್ಠ 100ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ನಿಲುಗಡೆಯಾಗುತ್ತದೆ. ಇದರಿಂದ ಬಾಡಿಗೆದಾರರಿಗೆ ಪ್ರತಿ ತಿಂಗಳಿಗೆ 1 ಲಕ್ಷ ರೂಪಾಯಿ ಹಣ ಬರುತ್ತಿದೆ. ಗುತ್ತಿಗೆದಾರ ಅಧಿಕ ಶುಲ್ಕ ವಸೂಲಿ ಮಾಡುತ್ತಿರುವುದರಿಂದ ಸಾರ್ವಜನಿಕರು ಎವಿಕೆ ಕಾಲೇಜು ಸೇರಿದಂತೆ ಇತೆರೆಡೆ ವಾಹನಗಳ ನಿಲ್ಲಿಸುತ್ತಿದ್ದಾರೆ. ಇದು ಸಹಜವಾಗಿಯೇ ನಗರದಲ್ಲಿ ಸಂಚಾರ ವ್ಯವಸ್ಥೆ ಮೇಲೆ ನೇರ ಪರಿಣಾಮ ಬೀರುತ್ತಿದೆ ಎನ್ನುವುದು ಈ ಭಾಗದ ಸಾರ್ವಜನಿಕರ ಆರೋಪವಾಗಿದೆ.
garudavoice21@gmail.com 9740365719